ಮಾರ್ಗರೇಟ್ ಅಟ್ವುಡ್ [Margaret Atwood]

ಮಾರ್ಗರೇಟ್ ಅಟ್ವುಡ್ ಕೆನಡಾದ ಬರಹಗಾರ್ತಿ. ‘ದಿ ಸರ್ಕಲ್ ಗೇಮ್’ (1966), ‘ದಿ ಹ್ಯಾಂಡ್‍ಮೇಡ್ಸ್ ಟೇಲ್’ (1985), ‘ದಿ ಬ್ಲೈಂಡ್ ಅಸ್ಯಾಸಿನ್’ (2000), ‘ಒರಿಕ್ಸ್ ಅಂಡ್ ಕ್ರೇಕ್’ (2003) ಮತ್ತು ‘ದಿ ಟೆಂಟ್’ ಸೇರಿದಂತೆ ಹಲವಾರು ಕವನ, ಸಣ್ಣ ಕಥೆಗಳು ಹಾಗೂ ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಕೃತಿಗಳನ್ನು ಹಲವಾರು ಭಾಷೆಗಳಿಗೆ ಅನುವಾದಿಸಲಾಗಿದೆ. ಅಷ್ಟೇ ಅಲ್ಲದೆ ಅವುಗಳು ಚಲನಚಿತ್ರಗಳಾಗಿಯೂ ರೂಪಾಂತರಗೊಂಡಿವೆ. ‘ಹ್ಯಾಂಡ್ ಮೇಡ್ಸ್ ಟೇಲ್’ ಮತ್ತು ‘ಅಲಿಯಾಸ್ ಗ್ರೇಸ್’ 2017ರಲ್ಲಿ ಕಿರುಚಿತ್ರಗಳಾಗಿ ತೆರೆಕಂಡವು.

ಆರಂಭಿಕ ಜೀವನ

ಅಟ್ವುಡ್ 1939ರ ನವೆಂಬರ್ 18ರಂದು ಕೆನಡಾದ ಒಂಟಾರಿಯೊದ ಒಟ್ಟಾವಾದಲ್ಲಿ ಪೌಷ್ಟಿಕ ತಜ್ಞ ತಾಯಿ ಮತ್ತು ಕೀಟಶಾಸ್ತ್ರಜ್ಞ ತಂದೆಗೆ ಜನಿಸಿದರು. ತಂದೆತಾಯಿ ಮಗಳಲ್ಲಿ ಪ್ರಕೃತಿ ಪ್ರೀತಿಯನ್ನು ಬೆಳೆಸಿದರು. ಕ್ವಿಬೆಕ್‍ನಲ್ಲಿ ಬೆಳೆದ ಇವರು ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡರು. ನಂತರದಲ್ಲಿ ಟೊರೊಂಟೊ ವಿಶ್ವವಿದ್ಯಾಲಯದ ವಿಕ್ಟೋರಿಯಾ ಕಾಲೇಜಿನಲ್ಲಿ 1961ರಲ್ಲಿ ಪದವಿ ಪಡೆದರು. ನಂತರ ಅವರು ರಾಡ್ ಕ್ಲಿಫ್‍ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ತನ್ನ ವೃತ್ತಿ ಜೀವನದ ಅವಧಿಯಲ್ಲಿ ಅಟ್ವುಡ್ ಕೆನಡಾ ಮತ್ತು ಅಮೇರಿಕಾದ ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೆಲಸ ನಿರ್ವಹಿಸಿದರು.

ಕೃತಿಗಳು

ಅಟ್ವುಡ್ ಅವರ ಮೊದಲ ಪ್ರಕಟಿತ ಕೃತಿ ಹಾಕ್ಸ್ಹೆಡ್ ಪ್ರೆಸ್ ಮೂಲಕ ಪ್ರಕಟವಾದ ‘ಡಬಲ್ ಪರ್ಸೆಫೋನ್’ (1961) ಕವನ ಕರಪತ್ರವಾಗಿದೆ. ‘ತಾಲಿಸ್ಮನ್ಸ್ ಫಾರ್ ಚಿಲ್ಡ್ರನ್’ (1965) ಮತ್ತು ‘ದಿ ಅನಿಮಲ್ಸ್ ಇನ್ ದಟ್ ಕಂಟ್ರಿ’ (1968) ಪುಸ್ತಕಗಳೊಂದಿಗೆ ಈ ದಶಕದಲ್ಲಿ ಹೆಚ್ಚಿನ ಕವನಗಳು ಬಂದವು. ನಂತರ ಅವರು ತಮ್ಮ ಮೊದಲ ಕಾದಂಬರಿ ‘ದಿ ಎಡಿಬಲ್ ವುಮನ್’ ಅನ್ನು 1969ರಲ್ಲಿ ಪ್ರಕಟಿಸಿದರು. ಮದುವೆಯಾಗಲಿರುವ ಮಹಿಳೆಯ ಸಾಮಾಜಿಕ ಸ್ಥಾನಮಾನದ ಬಗ್ಗೆ ಒಂದು ರೂಪಕ ಮತ್ತು ಹಾಸ್ಯವನ್ನು ಒಳಗೊಂಡ ಕೃತಿ ಇದು. ನಂತರ ‘ಸರ್ಫೇಸಿಂಗ್’ (1973), ‘ಲೇಡಿ ಒರಾಕಲ್’ (1976) ಮತ್ತು ‘ಲೈಫ್ ಬಿಫೋರ್ ಮ್ಯಾನ್’ (1980) ಕಾದಂಬರಿಗಳನ್ನು ಪ್ರಕಟಿಸಿದರು.

‘ದಿ ಹ್ಯಾಂಡ್‍ಮೇಡ್ಸ್ ಟೇಲ್’

1985ರಲ್ಲಿ ದಿ ಹ್ಯಾಂಡ್ ಮೇಡ್ಸ್ ಟೇಲ್ ಅಟ್ವುಡ್‍ಗೆ ಭಾರಿ ಮೆಚ್ಚುಗೆ ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿತು. ಪ್ರಜಾಪ್ರಭುತ್ವದಲ್ಲಿ ಏನಾಗಬಹುದೆಂಬುದರ ಬಗ್ಗೆ ಒಂದು ಮುನ್ಸೂಚನೆಯ ಎಚ್ಚರಿಕೆಯನ್ನು ಇದು ತಿಳಿಸುತ್ತದೆ. ಇದರಲ್ಲಿ ಒಳ್ಳೆಯ ಮಹಿಳೆಯರ ಗುಂಪು ಮತ್ತು ಕಾರ್ಪೋರೇಟ್ ಪುರುಷ ಮೇಲಾಧಿಕಾರಿಗಳ ಬಗ್ಗೆ ತಿಳಿಸಲಾಗಿದೆ. ಹ್ಯಾಂಡ್ಮೇಡ್ಸ್ ಟೇಲ್ ಮುಂದೆ ಚಲನಚಿತ್ರವಾಯಿತು. ಐಡನ್ ಕ್ವಿನ್, ಎಲಿಜಬೆತ್ ಮ್ಯಾಕ್ಗೋವರ್ನ್, ಫಾಯೆ ಡನ್‍ವೇ ಮತ್ತು ರಾಬರ್ಟ್‍ಡುವೆಲ್ ಇದರಲ್ಲಿ ನಟಿಸಿದರು. ದಶಕಗಳ ನಂತರ ಹ್ಯಾಂಡ್‍ಮೇಡ್ಸ್ ಟೇಲ್ ಅನ್ನು 2017ರಲ್ಲಿ ಟಿವಿ ಕಿರುತೆರೆಗೆ ಅಳವಡಿಸಲಾಯಿತು. ಇದರಲ್ಲಿ ಎಲಿಸಬೆತ್ ಮಾಸ್ ಆಫ್ರೆಡ್ ಆಗಿ, ಸಮೀರಾ ವಿಲೇ, ಅಲೆಕ್ಸಿಸ್ ಬ್ಲೆಡೆಲ್ ಮತ್ತು ಜೋಸೆಫ್ ಫಿಯೆನ್ನೆಸ್ ನಟಿಸಿದ್ದಾರೆ. ಇದು ಅತ್ಯುತ್ತಮ ನಾಟಕ ಸರಣಿ ಸೇರಿದಂತೆ ‘ಎಮ್ಮಿ ಪ್ರಶಸ್ತಿ’ಯನ್ನು ಗೆದ್ದುಕೊಂಡಿತು. ಇವರ ಮತ್ತೊಂದು ಕೃತಿಯಾದ ‘ಅಲಿಯಾಸ್ ಗ್ರೇಸ್’ 19ನೇ ಶತಮಾನದ ಮಧ್ಯಬಾಗದಲ್ಲಿ ಕೆನಡಾದಲ್ಲಿ ನಡೆದ ಒಂದು ಕೊಲೆಯ ಕಥೆ. 2017ರಲ್ಲಿ ಇದು ಕಿರುಸರಣಿಯಾಗಿ ಬಿಡುಗಡೆಯಾಯಿತು.

ಕಾದಂಬರಿ ಮತ್ತು ಕಾಮಿಕ್ಸ್

ಅಟ್ವುಡ್ ಸಮೃದ್ದ ಬರಹಗಾರರಾಗಿದ್ದುದ್ದಕ್ಕೆ ಸಾಕ್ಷಿಯಾಗಿ ಅವರಿಗೆ ‘ಬುಕರ್ ಪ್ರಶಸ್ತಿ’ ಲಭಿಸಿತು. ಹೊಸ ಸಹಸ್ರಮಾನವು ಅಟ್ವುಡ್ ಪರಿಸರವನ್ನು ಕೇಂದ್ರೀಕರಿಸಿದ ‘ಮ್ಯಾಡ್ಡಾಡ್ಡಮ್’ ಟ್ರೈಲಾಜಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ‘ಒರಿಕ್ಸ್ ಅಂಡ್ ಕ್ರೇಕ್’ (2003), ‘ದಿ ಇಯರ್ ಆಫ್ ದಿ ಫ್ಲಡ್’ (2019) ಮತ್ತು ‘ಮ್ಯಾಡ್ಡಾಡ್ಡಮ್’ (2013) ಸೇರಿವೆ. 2016ರಲ್ಲಿ ಅಟ್ವುಡ್ ಗ್ರಾಫಿಕ್ ಕಾದಂಬರಿಯಾದ ‘ಏಂಜಲ್ ಕ್ಯಾಟ್ಬರ್ಡ್’ ಅನ್ನು ಪ್ರಕಟಿಸಿದರು. ಇದು ಕೆನಡಾದ ಸಹ ಕಲಾವಿದ ಜಾನಿ ಕ್ರಿಸ್ಮಸ್ ಅವರೊಂದಿಗೆ ರೂಪ ಪಡೆಯಿತು. ಇದು ಎಂಜಿನಿಯರ್ ಒಬ್ಬನ ಸಾಹಸಗಳನ್ನು ತಿಳಿಸುತ್ತದೆ. ಫೆಬ್ರವರಿ 2017ರಲ್ಲಿ ಬಿಡುಗಡೆಯಾದ ‘ಏಂಜಲ್ ಕ್ಯಾಟ್ಬರ್ಡ್:ಟು ಕ್ಯಾಸಲ್ ಕ್ಯಾಟುಲಾ’ ಈ ಕೃತಿಯನ್ನು ಅನುಸರಿಸಿದೆ. ಅಟ್ವುಡ್ ಅವರು ಟೊರೊಂಟೊದಲ್ಲಿ ತನ್ನ ಸಂಗಾತಿ ಗ್ರೇಮ್ ಗಿಬ್ಸನ್ ಅವರೊಂದಿಗೆ ಸೆಪ್ಟೆಂಬರ್ 2019ರವರೆಗೂ ಅಂದರೆ ಸಾಯುವವರೆಗೂ ಒಟ್ಟಿಗಿದ್ದರು. ಈ ದಂಪತಿಗೆ ಒಬ್ಬ ಮಗಳಿದ್ದಳು.

 

***

Kannada Butti – ಕನ್ನಡ ಬುಟ್ಟಿ