ಪ್ರಾಚೀನ ರೋಮನ್ ಇತಿಹಾಸದ ಪ್ರಮುಖ ವ್ಯಕ್ತಿಯಾಗಿದ್ದ ಪಾಂಪೆ ರಾಜಕಾರಣಿ ಮತ್ತು ಮಿಲಿಟರಿ ಕಮಾಂಡರ್ ಆಗಿದ್ದರು. ರೋಮನ್ ಗಣರಾಜ್ಯದ ಕೊನೆಯ ಭಾಗದಲ್ಲಿ ಸಕ್ರಿಯರಾಗಿದ್ದ ಅವರು ಯಾವುದೇ ರಾಜಕೀಯ ಪಕ್ಷದ ಹತೋಟಿ ಇಲ್ಲದೆ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದರು. ಆದರೆ ಅವರು ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿ ಬೆಳೆದರು. ಅವರ ತಂದೆ ಗ್ನೇಯಸ್ ಪೊಂಪಿಯಸ್ ಸ್ಟಾçಬೊ ಕುಖ್ಯಾತ ವ್ಯಕ್ತಿ. ಪಾಂಪೆ ತನ್ನ ತಂದೆಯ ಆಜ್ಞೆಯಡಿಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದನು. ಅವರ ತಂದೆ ರೋಮ್ ಅನ್ನು ಮೇರಿಯನ್ನರಿಂದ ರಕ್ಷಿಸುವಾಗ ತೀರಿಕೊಂಡ ನಂತರ ಈತನು ಅಧಿಕಾರವನ್ನು ವಹಿಸಿಕೊಂಡನು. ಯುದ್ಧಗಳನ್ನು ಗೆಲ್ಲಲು ಯುದ್ಧತಂತ್ರದ ಕೌಶಲ್ಯಗಳನ್ನು ಬಳಸುವುದರಲ್ಲಿ ಪೊಂಪೆ ತನ್ನ ತಂದೆಗಿAತ ಉತ್ತಮನೆಂದು ಸಾಬೀತುಪಡಿಸಿದ. ಸೈನ್ಯವನ್ನು ಹೊಂದಿದ್ದ ಅವರು ಸಿರಿಯಾ ಅರ್ಮೇನಿಯಾ ಮತ್ತು ಪ್ಯಾಲೆಸ್ಟೆöÊನ್ಗಳನ್ನು ರೋಮನ್ ಸಾಮ್ರಾಜ್ಯದ ಅಡಿಯಲ್ಲಿ ತಂದರು. ಅವರು ಮೆಡಿಟರೇನಿಯನ್ ಸಮುದ್ರದಲ್ಲಿನ ಕಡಲ್ಗಳ್ಳರನ್ನು ಪಳಗಿಸಿ ಅವರಿಂದ ವಶಪಡಿಸಿಕೊಂಡ ಜಮೀನುಗಳ ನಿರ್ವಾಹಕರಾಗಿ ನೇಮಕಗೊಂಡರು. ಕ್ರಿ.ಪೂ. ೬೦ರಲ್ಲಿ ಮಾಜಿ ಪ್ರತಿಸ್ಪರ್ಧಿ ಜೂಲಿಯಸ್ ಸೀಸರ್ ಮತ್ತು ಮಾರ್ಕಸ್ ಲೈಸಿನಿಯಸ್ ಕ್ರಾಸ್ಸಸ್ ಅವರೊಂದಿಗೆ ಕೈಜೋಡಿಸಿದರು. ಈ ಮೂವರನ್ನು ಇತಿಹಾಸದಲ್ಲಿ “ಫಸ್ಟ್ ಟ್ರಯಂವೈರೇಟ್” ಎಂದು ಕರೆಯಲಾಗುತ್ತದೆ. ಸೀಸರ್ನ ಯಶಸ್ಸಿನ ಬಗ್ಗೆ ಪಾಂಪೆ ಅಸೂಯೆ ಪಟ್ಟರೆ ಸೀಸರ್ಗೂ ಸಹ ಪೊಂಪೆಯ ಅಸಾಧಾರಣ ಏರಿಕೆಯನ್ನು ಸಹಿಸಲಾಗಲಿಲ್ಲ. ಶೀಘ್ರದಲ್ಲೇ ಸೀಸರ್ ಅವನ ವಿರುದ್ಧ ಸಂಚು ಮಾಡಲು ಪ್ರಾರಂಭಿಸಿದನು. ಸಾಮಾನ್ಯರ ಬೆಂಬಲ ಪಾಂಪೆಯೊAದಿಗಿದ್ದರೆ ಈಜಿಪ್ಟಿನ ರಾಜ ಟಾಲೆಮಿ ಸೀಸರ್ಗೆ ಹೆದರುತ್ತಿದ್ದನು. ಸೀಸರ್ನ ಅಭಿಮಾನವನ್ನು ಗಳಿಸುವ ಸಲುವಾಗಿ ಟಾಲೆಮಿಯು ಪಾಂಪೆ ಈಜಿಪ್ಟ್ಗೆ ಬಂದ ಕೂಡಲೇ ಕ್ರಿ.ಪೂ. ೪೮ರಲ್ಲಿ ಸಂಚು ಹೂಡಿ ಕೊಂದನು.
ಬಾಲ್ಯ ಮತ್ತು ಆರಂಭಿಕ ಜೀವನ
ಗ್ನೇಯಸ್ ಪೊಂಪಿಯಸ್ ಮ್ಯಾಗ್ನಸ್ ಅಥವಾ ಪಾಂಪೆ ಸೆಪ್ಟೆಂಬರ್ ೨೯, ಕ್ರಿ.ಪೂ. ೧೦೬ ರಂದು ಇಟಲಿಯ ಪಿಸೆನಂನಲ್ಲಿ ರೋಮನ್ ಗಣರಾಜ್ಯದ ಕೊನೆಯ ಕಾಲದಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ರೋಮನ್ ಕುಲೀನರ ಭಾಗವಾಗಿದ್ದ ಮೊದಲ ಕುಟುಂಬದ ಸದಸ್ಯರಾಗಿದ್ದರು. ಕ್ರಿ.ಪೂ. ೧೪೧ರಲ್ಲಿ ಪಾಂಪೆಯ ತಂದೆ ಮೊದಲ ಬಾರಿಗೆ ದೂತಾವಾಸದ ಅಧಿಕಾರಿ ಸ್ಥಾನವನ್ನು ಪಡೆದನು. ಅವರ ತಂದೆ ಪೊಂಪಿಯಸ್ ಸ್ಟಾçಬೊ ಒಬ್ಬ ಸಮರ್ಥ ಮಿಲಿಟರಿ ಜನರಲ್ ಆಗಿದ್ದನು. ಅವರು ‘ಸುಲ್ಲಾ’ ಅವರ ಮಿತ್ರರಾಗಿ ಹೋರಾಡಿದರು. ‘ಸುಲ್ಲಾ’ ಅವರು ಸರ್ವಾಧಿಕಾರದ ಬೆಂಬಲಿಗರಾಗಿದ್ದರು. ಪಾಂಪೆ ಶ್ರೀಮಂತ ಮತ್ತು ಗೌರವಾನ್ವಿತ ರೋಮನ್ ಕುಟುಂಬದಲ್ಲಿ ಜನಿಸಿದ್ದರಿಂದ ಅದರ ಅನುಕೂಲಗಳೊಂದಿಗೆ ಬೆಳೆದನು. ಗ್ರೀಕ್ ಪುರಾಣಗಳೊಂದಿಗೆ ಪಾಂಪೆಗೆ ಉತ್ತಮ ಶಿಕ್ಷಣ ನೀಡಲಾಯಿತು. ಅವನು ಹದಿಹರೆಯದ ವಯಸ್ಸಿನಲ್ಲಿದ್ದಾಗ ಅವನ ತೀಕ್ಷ÷್ಣ ಮನಸ್ಸು ಅವನನ್ನು ಸಮರ್ಥ ವ್ಯಕ್ತಿಯನ್ನಾಗಿ ಮಾಡಿತು.
ಪಾಂಪೆ ಬೆಳೆಯುತ್ತಿದ್ದಾಗ ರೋಮನ್ ಸಾಮ್ರಾಜ್ಯವು ಆಗಾಗ್ಗೆ ಅಂತರ್ಯುದ್ಧಗಳಿAದ ಬಳಲುತ್ತಿತ್ತು. ಅವುಗಳಲ್ಲಿ ಪ್ರಜಾಪ್ರಭುತ್ವದ ಪ್ರತಿಪಾದಕರಾಗಿದ್ದ ‘ಸುಲ್ಲಾ’ ಮತ್ತು ‘ಮಾರಿಯಸ್’ ನಡುವಿನ ಯುದ್ಧವು ಅತ್ಯಂತ ಘೋರವಾಗಿತ್ತು. ಪಾಂಪೆಯ ತಂದೆ ಮರಿಯನ್ನರ ರೋಮ್ ಮುತ್ತಿಗೆಯ ಸಮಯದಲ್ಲಿ ನಿಧನರಾದರು. ಆದಾಗ್ಯೂ ಅವರ ಸಾವಿಗೆ ನಿಜವಾದ ಕಾರಣ ಇನ್ನೂ ಚರ್ಚೆಯಲ್ಲಿದೆ. ಅವರ ತಂದೆ ಕುಖ್ಯಾತ ವ್ಯಕ್ತಿಯಾಗಿದ್ದನೆಂದು ಪ್ರತೀತಿ ಇದೆ. ಪಾಂಪೆಯು ತನ್ನ ತಂದೆಯ ನಾಯಕತ್ವದಲ್ಲಿ ಹೋರಾಡುತ್ತಿದ್ದ ಸಮಯದಲ್ಲಿ ಅವರಿಂದ ಸಾಕಷ್ಟು ಕಲಿತಿದ್ದರು. ತಂದೆಯ ಮರಣದ ನಂತರ ಪಾಂಪೆ ಸೈನ್ಯದ ಉಸ್ತುವಾರಿ ವಹಿಸಿಕೊಂಡನು. ಅವನ ತಂದೆಯ ಮೇಲೆ ಹಲವಾರು ವಿಶ್ವಾಸಘಾತುಕತನ ಮತ್ತು ದುರಾಸೆಯ ಆರೋಪಗಳು ಇದ್ದವು. ಅದರಿಂದ ಅವನ ಮರಣದ ನಂತರ ಪಾಂಪೆ ತನ್ನ ತಂದೆ ಮಾಡಿದ ಕೃತ್ಯಗಳಿಗೆ ವಿಚಾರಣೆಗಳನ್ನು ಎದುರಿಸಬೇಕಾಯಿತು.
ಅಧಿಕಾರಕ್ಕೆ ಏರಿ
ತನ್ನ ತಂದೆಯ ಕಾರ್ಯಗಳಿಗಾಗಿ ಆರೋಪಗಳನ್ನು ಎದುರಿಸಿ ವಿಚಾರಣೆಯನ್ನು ಸಂದರ್ಭದಲ್ಲಿ ನ್ಯಾಯಾಲಯದ ವಾದವಿವಾದಗಳ ಸಮಯದಲ್ಲಿ ಮಾತಿನ ಚಕಮಕಿ ನಡೆಸುತ್ತ ಅಲ್ಲಿ ಪಾಂಪೆ ತಮ್ಮ ಅಪಾರ ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದರು. ಆ ನ್ಯಾಯಾಧೀಶರು ಪಾಂಪೆಯ ಬಗ್ಗೆ ಸಹಾನುಭೂತಿ ಹೊಂದಿದ್ದರು. ಭವಿಷ್ಯದ ನಾಯಕನಾಗಿ ತನ್ನ ಕೌಶಲ್ಯವನ್ನು ತಿಳಿದಿದ್ದ ಅವನಿಗೆ ತನ್ನ ಮಗಳು ‘ಆಂಟಿಸ್ಟಿಯಾಳ’ನ್ನು ಕೊಟ್ಟು ಮದುವೆ ಮಾಡಿಸಿದರು. ಶೀಘ್ರದಲ್ಲೇ ಪಾಂಪೆಯನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಯಿತು. ತನ್ನ ತಂದೆ ಪ್ರಾರಂಭಿಸಿದ ಕಾರ್ಯವನ್ನು ಮುಗಿಸುವ ಹಾದಿಯಲ್ಲಿ ಕ್ರಿ.ಪೂ ೮೩ರಲ್ಲಿ ಪಾಂಪೆ ‘ಸುಲ್ಲಾ’ ಅವರೊಂದಿಗೆ ಕೈಜೋಡಿಸಿದನು. ರೋಮ್ನ ಅಂತಿಮ ಆಕ್ರಮಣದ ಸಮಯದಲ್ಲಿ ಈ ಬಾರಿ ಮರಿಯನ್ನರನ್ನು ನಾಶಪಡಿಸಲಾಯಿತು. ನಂತರ ಸುಲ್ಲಾ ಅವರಿಗೆ ಸರ್ವಾಧಿಕಾರಿ ಸ್ಥಾನವನ್ನು ನೀಡಲಾಯಿತು. ಪೊಂಪೆಯವರ ಸಾಮರ್ಥ್ಯಗಳ ಬಗ್ಗೆ ಚೆನ್ನಾಗಿ ಅರಿತಿದ್ದ ಸುಲ್ಲಾ ಪಾಂಪೆಯನ್ನು ನ್ಯಾಯಾಲಯದಲ್ಲಿ ನಿರ್ವಾಹಕನನ್ನಾಗಿ ಮಾಡಿದನು. ನಂತರ ತಮ್ಮ ಸಂಬAಧವನ್ನು ಗಟ್ಟಿಗೊಳಿಸಲು ಪೊಂಪೆಯನ್ನು ಅವನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿ ತನ್ನ ಮಲಸಹೋದರಿ ಎಮಿಲಿಯಾ ಸ್ಕೌರಾಳನ್ನು ಮದುವೆಯಾಗಲು ಕೇಳಿಕೊಂಡನು. ಅದನ್ನು ಪಾಂಪೆ ಸಂತೋಷದಿAದ ಒಪ್ಪಿಕೊಂಡನು.
ಅಷ್ಟೊತ್ತಿಗೆ ಉಳಿದ ‘ಮರಿಯನ್ನ’ರು ಸಿಸಿಲಿಗೆ ತೆರಳಿದ್ದರು. ಅಲ್ಲಿ ಅವರು ‘ಸುಲ್ಲಾ’ ಅವರ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಲು ಮತ್ತೆ ತಮ್ಮ ಪಡೆಗಳನ್ನು ಒಟ್ಟುಗೂಡಿಸಿದರು. ಕೂಡಲೇ ಪಾಂಪೆ ತನ್ನ ಮಿಲಿಟರಿ ಕುಶಾಗ್ರಮತಿಯನ್ನು ಸಾಬೀತುಪಡಿಸಿದನು. ಶೀಘ್ರದಲ್ಲೇ ‘ಸಿಸಿಲಿ’ಯನ್ನು ವಹಿಸಿಕೊಂಡು ಶತ್ರುಗಳಿಗೆ ವಿಶ್ರಾಂತಿ ಪಡೆಯಲು ಬಿಡಲಿಲ್ಲ. ಅವನನ್ನು ಕರುಣಾಳು ಎಂದು ಕರೆಯಲ್ಪಡುತ್ತಿದ್ದರೂ ಅವನು ತನ್ನ ಶತ್ರುಗಳಿಗೆ ಕ್ರೂರನಾಗಿದ್ದನು ಅವನು “ಹದಿಹರೆಯದ ಕಟುಕ” ಎಂದು ಪ್ರಸಿದ್ಧನಾದನು. ಏತನ್ಮಧ್ಯೆ ರೋಮ್ನಲ್ಲಿನ ‘ಸುಲ್ಲಾ’ನ ಪಡೆಗಳನ್ನು ನಿಗ್ರಹಿಸಲು ಗ್ನೇಯಸ್ ಡೊಮಿಟಿಯಸ್ನು ಆಫ್ರಿಕಾದಲ್ಲಿ ದೊಡ್ಡ ಬಲವನ್ನು ಒಟ್ಟುಗೂಡಿಸುತ್ತಿದ್ದ. ಪೊಂಪೆಯು ಇನ್ನೂ ಚಿಕ್ಕ ವಯಸ್ಸಿನವನಾಗಿದ್ದು ತಮ್ಮ ಪಡೆಗಳ ನಾಯಕರಾಗಿ ಅವನ ಅಸಾಧಾರಣ ಪ್ರದರ್ಶನವು ಸುಲ್ಲಾ ಅವರಿಗೆ ತುಂಬಾ ಇಷ್ಟವಾಯಿತು. ನಂತರ ಪಾಂಪೆಯನ್ನು ಆಫ್ರಿಕಾಕ್ಕೆ ಕಳುಹಿಸಿದನು. ಪಾಂಪೆ ಅಲ್ಲಿ ‘ಡೊಮಿಟಿಯಸ್’ನನ್ನು ನಿಗ್ರಹಿಸುವಲ್ಲಿ ಯಶಸ್ವಿಯಾದನು. ಅವನು ರೋಮ್ಗೆ ಹಿಂದಿರುಗಿದಾಗ ಪಾಂಪೆಗೆ ‘ಮ್ಯಾಗ್ನಸ್’ ಎಂಬ ಬಿರುದನ್ನು ನೀಡಲಾಯಿತು ಇದರರ್ಥ ‘ಶ್ರೇಷ್ಠ’. ನಂತರ ‘ಮ್ಯಾಗ್ನಸ್’ ಎಂಬುದು ಅಧಿಕೃತವಾಗಿ ಅವನ ಕೊನೆಯ ಹೆಸರಾಯಿತು.
ಕ್ರಿ.ಪೂ. ೮೧ರಲ್ಲಿ ರೋಮ್ಗೆ ಹಿಂದಿರುಗಿದ ನಂತರ ಪಾಂಪೆಯು ‘ವಿಜಯೋತ್ಸವ’ ಆಚರಣೆಯ ಮೆರವಣಿಗೆಯನ್ನು ಕೋರಿದನು. ಆದಾಗ್ಯೂ ಅವನ ಅಸಾಧಾರಣ ಬೇಡಿಕೆಗಳನ್ನು ಈಡೇರಿಸಲು ಪಾಂಪೆ ಇನ್ನೂ ಚಿಕ್ಕವನಾಗಿದ್ದರಿಂದ ಆತನ ವಿನಂತಿಯನ್ನು ಸುಲ್ಲಾ ನಿರಾಕರಿಸಿದರು. ಕ್ರಿ.ಪೂ ೭೯ರಲ್ಲಿ ಪೊಂಪೆಯು ಮಾರ್ಕಸ್ ಎಮಿಲಿಯಸ್ ಲೆಪಿಡಸ್ಗಾಗಿ ಪ್ರಚಾರ ಮಾಡಿದನು. ಅಲ್ಲದೆ ಸುಲ್ಲಾ ಅವರ ಇಚ್ಛೆಗೆ ವಿರುದ್ಧವಾಗಿ ಅವನನ್ನು (ಕಾನ್ಸೂಲ್) ದೂತಾವಾಸದ ಅಧಿಕಾರಿಯನ್ನಾಗಿ ಮಾಡಿದರು. ಇದು ‘ಸುಲ್ಲಾ’ ಮತ್ತು ಪಾಂಪೆಯ ನಡುವೆ ಸ್ವಲ್ಪ ಸಂಘರ್ಷಕ್ಕೆ ಕಾರಣವಾಯಿತು. ಆದರೆ ಎರಡೂ ಪಕ್ಷಗಳು ಪರಸ್ಪರ ಗೌರವಿಸುತ್ತಿದ್ದವು. ದಂಗೆ ಬಹುತೇಕ ಅನಿವಾರ್ಯವಾಗಿದ್ದರೂ ಅದು ನಡೆಯಲಿಲ್ಲ. ಆದಾಗ್ಯೂ ಸುಲ್ಲಾ ಸಾಯುವ ಮುನ್ನ ಪಾಂಪೆಯನ್ನು ಹೊರಹಾಕಿದರು. ಕ್ರಿ.ಪೂ. ೭೯ರಲ್ಲಿ ‘ಸುಲ್ಲಾ’ನ ಮರಣದ ನಂತರ ‘ಮಾರ್ಕಸ್ ಎಮಿಲಿಯಸ್’ ಅವನ ಸ್ಥಾನವನ್ನು ಪಡೆದನು. ಹೊಸ ಆಡಳಿತಗಾರನು ‘ಸುಲಾ’್ಲನನ್ನು ಹೆಚ್ಚು ಇಷ್ಟಪಡುತ್ತಿರಲಿಲ್ಲ. ಆದರೆ ಪಾಂಪೆ ಸುಲ್ಲಾನ ಸಮಾಧಿಯನ್ನು ಗೌರವದಿಂದ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದನು. ಇಬ್ಬರ ನಡುವೆ ಹಲವಾರು ಘರ್ಷಣೆಗಳು ನಡೆದವು ಆದಾಗ್ಯೂ ರೋಮನ್ ಸಾಮ್ರಾಜ್ಯವು ಮತ್ತೊಂದು ಕ್ರಾಂತಿಯಿAದ ತಪ್ಪಿಸಿಕೊಂಡಿತು.
ಮಿಲಿಟರಿ ವೃತ್ತಿ
ಪಾಂಪೆಯು ತಮ್ಮ ೩೦ರ ದಶಕವನ್ನು ಸಮೀಪಿಸುವ ಹೊತ್ತಿಗೆ ಅವರ ಪ್ರಭಾವ ಮತ್ತು ಖ್ಯಾತಿ ರಾಷ್ಟಿçÃಯ ಗಡಿಗಳನ್ನು ಮೀರಿ ಪ್ರಯಾಣಿಸಿತ್ತು. ಅಲ್ಲದೆ ರೋಮನ್ ಪ್ರಭಾವವನ್ನು ಉಳಿಸಿಕೊಳ್ಳಲು ಅವರು ಸ್ಪೇನ್ನಲ್ಲಿ ಹಲವು ವರ್ಷಗಳ ಕಾಲ ಹೋರಾಡಿದರು. ಸ್ಪೇನ್ನಲ್ಲಿ ಅವರ ಅಸಾಧಾರಣ ಅಭಿಯಾನದ ನಂತರ ಅವರು ಕ್ರಿ.ಪೂ. ೭೦ರಲ್ಲಿ ಕಾನ್ಸುಲ್ ಆಗಿ ಆಯ್ಕೆಯಾದರು. ಆಗ ಅವರಿಗೆ ಕೇವಲ ೩೬ ವರ್ಷ. ಪಾಂಪೆ ಅಂತರ್ಗತವಾಗಿ ಮಿಲಿಟರಿ ಕಮಾಂಡರ್ ಆಗಿದ್ದನು. ಆ ಕಾರಣದಿಂದ ಕಾನ್ಸುಲ್ ಕಚೇರಿಯಲ್ಲಿ ಕುಳಿತುಕೊಳ್ಳಲು ನಿರಾಕರಿಸಿದನು. ಬದಲಾಗಿ ಪಾಂಪೆ ರೋಮನ್ ಸಾಮ್ರಾಜ್ಯವನ್ನು ಬಲಪಡಿಸಲು ಹಲವಾರು ಅಭಿಯಾನಗಳನ್ನು ನಡೆಸಿದನು.
ಪಾಂಪೆಯ ಜೀವನದಲ್ಲಿ ‘ಮೆಡಿಟರೇನಿಯನ್ ಸಮುದ್ರಯಾನ’ ಅತ್ಯಂತ ಯಶಸ್ವಿ ಸಮುದ್ರಯಾನವೆಂದು ಪರಿಗಣಿಸಲ್ಪಟ್ಟಿದೆ. ಈ ಸಮುದ್ರಯಾನವನ್ನು ಪಾಂಪೆ ನೌಕಾಪಡೆಯ ಒಂದು ಸಣ್ಣ ಭಾಗದ ಮೇಲೆ ಹಿಡಿತ ಸಾಧಿಸಿದ ನಂತರ ಪ್ರಾರಂಭಿಸಿದನು. ಅವರು ಅಲ್ಲಿ ಕಡಲ್ಗಳ್ಳರೊಂದಿಗೆ ಹೋರಾಡಿ ಅವರನ್ನು ಯಶಸ್ವಿಯಾಗಿ ನಿಗ್ರಹಿಸಿದನು. ರೋಮನ್ ವ್ಯಾಪಾರಿಗಳಿಗೆ ಕಡಲ್ಗಳ್ಳರು ದೊಡ್ಡ ಅಡಚಣೆಯಾಗಿದ್ದರು. ಅವರನ್ನು ಹೊಡೆದೊಡಿಸಿ ಸಾಗರವನ್ನು ತೆರವುಗೊಳಿಸಿದರು. ಇದರಿಂದ ಇತರ ಸಾಮ್ರಾಜ್ಯಗಳೊಂದಿಗಿನ ರೋಮ್ನ ವ್ಯವಹಾರ ಸಂಬAಧವು ವೇಗವನ್ನು ಪಡೆದುಕೊಂಡಿತು. ಪರಿಣಾಮವಾಗಿ ಪಾಂಪೆಯು ರಾಜಕಾರಣಿಯಾಗಿ ತಮ್ಮ ಸಾಮರ್ಥ್ಯವನ್ನು ಪ್ರಚುರಪಡಿಸಿದನು. ಜೊತೆಗೆ ಪಾಂಪೆಯು ಸಮುದ್ರದಲ್ಲಿ ಹಕ್ಕನ್ನು ಹೊಂದಿರುವ ಹಲವಾರು ರಾಜ್ಯಗಳೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಂಡನು.
ಆದಾಗ್ಯೂ ಅವರು ತಮ್ಮ ಅಭಿಯಾನಗಳನ್ನು ಮುಂದುವರೆಸಿ ಶೀಘ್ರದಲ್ಲೇ ಜೆರುಸಲೆಮ್ ಮತ್ತು ಸಿರಿಯಾವನ್ನು ರೋಮನ್ ಸಾಮ್ರಾಜ್ಯದ ಅಧಿಪತ್ಯಕ್ಕೆ ಒಳಪಡಿಸಿದರು. ಕ್ರಿ.ಪೂ ೬೦ರ ಹೊತ್ತಿಗೆ ‘ಜೂಲಿಯಸ್ ಸೀಸರ್’ ಸ್ಪೇನ್ನಿಂದ ಆಗಮಿಸಿ ರೋಮನ್ ಸಾಮ್ರಾಜ್ಯದ ದೊಡ್ಡ ಭೂಮಿಯನ್ನು ಆಳುತ್ತಿದ್ದನು. ಪಾಂಪೆ ಮತ್ತೆ ರೋಮ್ಗೆ ಬಂದಾಗ ತೆರೆದ ಹೃದಯದಿಂದ ಸ್ವಾಗತಿಸಲಾಯಿತು. ಸೀಸರ್ ಪಾಂಪೆಯೊAದಿಗೆ ಮೈತ್ರಿ ಮಾಡಿಕೊಂಡನು. ಅಲ್ಲದೇ ‘ಮಾರ್ಕಸ್ ಲೈಸಿನಿಯಸ್ ಕ್ರಾಸ್ಸಸ್’ ಕೂಡ ಈ ಮೈತ್ರಿಕೂಟಕ್ಕೆ ಪ್ರವೇಶಿಸಿದ ಮೂರನೆಯ ವ್ಯಕ್ತಿಯಾದನು. ಆದ್ದರಿಂದ ಇದನ್ನು ಐತಿಹಾಸಿಕವಾಗಿ ‘ಮೊದಲ ಟ್ರಯಂವೈರೇಟ್’ (ಫಸ್ಟ್ ಟ್ರಯಂವೈರೇಟ್) (ಮೊದಲ ತ್ರಿಮೂರ್ತಿಗಳು) ಎಂದು ಕರೆಯುತ್ತಾರೆ. ಇದರಿಂದ ಪ್ರಸಿದ್ಧ ಮೂವರ ಗುಂಪು ರೂಪುಗೊಂಡಿತ್ತು. ಸೀಸರ್ನ ಮಿಲಿಟರಿ ಸಾಮರ್ಥ್ಯಗಳು ಎಲ್ಲರಿಗೂ ತಿಳಿದಿದ್ದವು ಹಾಗೆಯೇ ಪಾಂಪೆಯ ಬುದ್ಧಿವಂತಿಕೆಯೊAದಿಗೆ ಸೇರಿ ಈ ಮೂವರು ಮುಂದಿನ ಏಳು ವರ್ಷಗಳ ಕಾಲ ರೋಮನ್ ಸಾಮ್ರಾಜ್ಯವನ್ನು ಆಳಿದರು.
ಆದಾಗ್ಯೂ ಮೂವರ ನಡುವೆ ಎಲ್ಲವೂ ಸರಿಯಾಗಿರಲಿಲ್ಲ. ಪ್ರತಿಯೊಬ್ಬರೂ ಮೈತ್ರಿಕೂಟದಲ್ಲಿ ಇತರರಿಗಿಂತ ಹೆಚ್ಚು ಜನಪ್ರಿಯ ಮತ್ತು ಶಕ್ತಿಯುತವಾಗಿರಲು ನಿರಂತರ ಹೋರಾಟದಲ್ಲಿದ್ದರು. ಸೀಸರ್ನ ಯಶಸ್ಸು ಪಾಂಪೆಗೆ ಅಸೂಯೆ ಹುಟ್ಟಿಸಿತು. ಇದು ಕ್ರಿ.ಪೂ. ೫೩ರಲ್ಲಿ “ಮೊದಲ ಟ್ರಯಂವೈರೇಟ್”ನ ಕುಸಿತಕ್ಕೆ ಕಾರಣವಾಯಿತು. ಇಟಲಿಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ಸೀಸರ್ನನ್ನು ಕೇಳಲಾಯಿತು. ಆಗ ಇಟಲಿ ಪೊಂಪೆಯ ಆಳ್ವಿಕೆಯಲ್ಲಿತ್ತು. ತದನಂತರ ಸೀಸರ್ ಕ್ರಿ.ಪೂ. ೪೯ರಲ್ಲಿ ಅವನ ವಿರುದ್ಧ ಯುದ್ಧ ಘೋಷಿಸಿದನು. ಪಾಂಪೆ ಸಿದ್ಧನಿಲ್ಲದಿದ್ದರೂ ಇಟಲಿ ಮತ್ತು ಸ್ಪೇನ್ನಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವAತೆ ಒತ್ತಾಯಿಸಲಾಯಿತು. ಆದಾಗ್ಯೂ ಗ್ರೀಸ್ನಲ್ಲಿ ಸೀಸರ್ನ ಪಡೆಗಳು ಕಡಿಮೆಯಾದವು. ಆದಾಗ್ಯೂ ಶೀಘ್ರದಲ್ಲೇ ಸೀಸರ್ನ ಪಡೆಗಳು ಪಾಂಪೆಯನ್ನು ಹಿಮ್ಮೆಟ್ಟುವಂತೆ ಮಾಡಿದವು. ಕ್ರಿ.ಪೂ. ೪೮ರಲ್ಲಿ ಸೀಸರ್ ಅಂತಿಮವಾಗಿ ಪಾಂಪೆಯನ್ನು ಸೋಲಿಸಿ ಈಜಿಪ್ಟ್ಗೆ ಪಲಾಯನ ಮಾಡವಂತೆ ಮಾಡಿದನು.
ಆ ಸಮಯದಲ್ಲಿ ಕಿಂಗ್ ಟಾಲೆಮಿ ಈಜಿಪ್ಟ್ ಅನ್ನು ಆಳುತ್ತಿದ್ದನು. ಟಾಲೆಮಿ ಅವರ ಹಿಂದಿನ ಮಿತ್ರರಾಗಿದ್ದರಿಂದ ಪಾಂಪೆ ಅವನನ್ನು ಆಶ್ರಯಕ್ಕಾಗಿ ಕೇಳಿದನು. ಆದಾಗ್ಯೂ ಟಾಲೆಮಿ ತನ್ನದೇ ಆದ ಇತರ ಯೋಜನೆಗಳನ್ನು ಹೊಂದಿದ್ದನು. ಟಾಲೆಮಿಯು ಸೀಸರ್ನ ಭಯದಿಂದ ಅಪರಾಧ ಮಾಡಬಹುದೆಂದು ಪಾಂಪೆ ಊಹಿಸಿರಲಿಲ್ಲ.
ನಿಧನ
ಕ್ರಿ.ಪೂ. ೪೮ ಸೆಪ್ಟೆಂಬರ್ ೨೮ರಂದು ಪಾಂಪೆಯನ್ನು ಕಿಂಗ್ ಟಾಲೆಮಿ ಸ್ವಾಗತಿಸಿ ಪೆಲುಸಿಯಂನಲ್ಲಿ ಇಳಿಯುವಂತೆ ಮಾಡಿದನು. ಪಾಂಪೆ ಇಳಿದ ಕೂಡಲೇ ಟಾಲೆಮಿಯ ಜನರಲ್ಗಳಲ್ಲೊಬ್ಬ ಹಿಂದಿನಿAದ ಹೊಡೆದನು. ಆ ಏಟಿನಿಂದ ಪಾಂಪೆ ಸ್ಥಳದಲ್ಲೇ ಮೃತಪಟ್ಟನು. ಇತಿಹಾಸಕಾರರು ಪಾಂಪೆಯನ್ನು ರೋಮನ್ ಗಣರಾಜ್ಯದ ಕೊನೆಯಲ್ಲಿ ವಾಸಿಸುತ್ತಿದ್ದ ಶ್ರೇಷ್ಠ ರೋಮನ್ ಜನರಲ್ಗಳಲ್ಲಿ ಒಬ್ಬನೆಂದು ಪರಿಗಣಿಸುತ್ತಾರೆ. ಪಾಂಪೆ ಹಲವಾರು ಪುಸ್ತಕಗಳು, ಕಾದಂಬರಿಗಳು, ವರ್ಣಚಿತ್ರಗಳು, ಚಲನಚಿತ್ರಗಳು ಮತ್ತು ಕವಿತೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವೈಯಕ್ತಿಕ ಜೀವನ
ಪಾಂಪೆ ತನ್ನ ಜೀವಿತಾವಧಿಯಲ್ಲಿ ಐದು ಬಾರಿ ವಿವಾಹವಾಗಿದ್ದನು. ಅವರ ಬಹುತೇಕ ಎಲ್ಲಾ ವಿವಾಹಗಳು ರಾಜಕೀಯ ಮೈತ್ರಿಗಳಿಂದಾಗಿದ್ದವು. ಅವನು ಆಂಟಿಸ್ಟಿಯಾ, ಎಮಿಲಿಯಾ ಸ್ಕೌರಾ, ಮುಸಿಯಾ ಟೆರ್ಟಿಯಾ, ಜೂಲಿಯಾ ಮತ್ತು ಕಾರ್ನೆಲಿಯಾ ಮೆಟೆಲ್ಲಾ ರವರುಗಳನ್ನು ವಿವಾಹವಾಗಿದ್ದನು. ಪಾಂಪೆ ತನ್ನ ಮೂರನೆಯ ಹೆಂಡತಿ ಮುಸಿಯಾರಿಂದ ಮೂರು ಮಕ್ಕಳನ್ನು ಪಡೆದಿದ್ದನು.