ಟೋನಿ ಮಾರಿಸನ್ ಕಾದಂಬರಿಕಾರ್ತಿ, ಸಂಪಾದಕಿ ಮತ್ತು ಪ್ರಾಧ್ಯಾಪಕಿ. ಹಾಗೇಯೆ ನೊಬೆಲ್ ಪ್ರಶಸ್ತಿ ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತೆ. ಇವರ ಕಾದಂಬರಿಗಳು ಸೊಗಸಾದ ಭಾಷೆ ಮತ್ತು ಸಮೃದ್ಧವಾಗಿ ಬಣ್ಣಿಸಿರುವ ಆಫ್ರಿಕನ್, ಅಮೇರಿಕನ್ ಪಾತ್ರಗಳಿಗೆ ಹೆಸರುವಾಸಿಯಾಗಿವೆ. ದಿ ಬ್ಲೂಸ್ಟ್ ಐ, ಸುಲಾ, ಸಾಂಗ್ ಆಫ್ ಸೊಲೊಮನ್, ಜಾಝ್, ಲವ್ ಅಂಡ್ ಮರ್ಸಿ ಇವರ ಪ್ರಮುಖ ಕಾದಂಬರಿಗಳು. ಮಾರಿಸನ್ ಪುಸ್ತಕ ಪ್ರಪಂಚದ ಪುರಸ್ಕಾರಗಳು ಮತ್ತು ಗೌರವ ಪದವಿಗಳನ್ನು ಗಳಿಸುವುದರ ಜೊತೆಗೆ ೨೦೧೨ರಲ್ಲಿ ಅಧ್ಯಕ್ಷೀಯ ಪದಕವನ್ನು ಪಡೆದಿದ್ದಾರೆ. ಓಹಿಯೋದ ಲೋರೈನಿದಲ್ಲಿ ೧೮ ಫೆಬ್ರವರಿ ೧೯೩೧ರಲ್ಲಿ ಕ್ಲೋಯ್ ಅಂಥೋನಿ ವೊಫೋರ್ಡ್ ಅವರ ನಾಲ್ಕನೆಯ ಮಗಳಾಗಿ ಟೋನಿ ಮಾರಿಸನ್‌ರವರು ಜನಿಸಿದರು. ಆಕೆಯ ತಂದೆ ಅಂಥೋನಿ ವೊಫೋರ್ಡ್ ವೆಲ್ಡರ್ ವೃತ್ತಿಯ ಜೊತೆಗೆ ಕುಟುಂಬದ ನಿರ್ವಹಣೆಗಾಗಿ ಹಲವಾರು ಉದ್ಯೋಗಗಳನ್ನು ಏಕಕಾಲದಲ್ಲಿ ಮಾಡುತ್ತಿದ್ದರು. ತಾಯಿ ರಾಮಾ ಮನೆ ಕೆಲಸ ಮಾಡುತ್ತಿದ್ದರು.
ಎಲ್ಲರ ಜೊತೆ ವಾಸಿಸುತ್ತಿದ್ದ ಮಾರಿಸನ್ ತನ್ನ ಹದಿಹರೆಯಕ್ಕೆ ಬರುವವರೆಗೂ ಜನಾಂಗೀಯ ವಿಭಜನೆಗಳ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಒಂದು ಬಾರಿ ಅವರು ನ್ಯೂಯಾರ್ಕ್ ಟೈಮ್ಸ್ನ ವರದಿಗಾರರಿಗೆ ‘ನಾನು ಪ್ರಥಮ ದರ್ಜೆಯಲ್ಲಿದ್ದಾಗ, ನಾನು ಕೀಳು ಎಂದು ಯಾರು ಭಾವಿಸಿರಲಿಲ್ಲ. ನಾನೋಬ್ಬಳೇ ಕಪ್ಪು ಮತ್ತು ಓದಬಲ್ಲ ಏಕೈಕ ಮಗು’ ಎಂದು ತಿಳಿಸಿದ್ದರು. ತನ್ನ ಅಧ್ಯಯನಕ್ಕೆ ಅನುಕೂಲಕರವಾಗಲೇಂದು ಶಾಲೆಯಲ್ಲಿ ಲ್ಯಾಟಿನ್ ಭಾಷೆಯನ್ನು ತೆಗೆದುಕೊಂಡ ಅವರು ಯುರೋಪಿಯನ್ ಸಾಹಿತ್ಯದ ಅನೇಕ ಶ್ರೇಷ್ಠ ಕೃತಿಗಳನ್ನು ಓದಿದರು. ೧೯೪೯ರಲ್ಲಿ ಲೋರೈನ್‌ನಿಂದ ಪದವಿ ಪಡೆದರು. ಹೊವಾರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿ ಸಾಹಿತ್ಯದಲ್ಲಿ ತನ್ನ ಆಸಕ್ತಿಯನ್ನು ಮುಂದುವರೆಸಿದ ಮಾರಿಸನ್ ಇಂಗ್ಲಿಷ್ ಮೇಜರ್ ಹಾಗೂ ತನ್ನ ಸಣ್ಣ ಆಸಕ್ತಿಗೊಸ್ಕರ ಕ್ಲಾಸಿಕ್‌ಗಳನ್ನು ಆಯ್ಕೆ ಮಾಡಿಕೊಂಡಳು. ೧೯೫೩ರಲ್ಲಿ ಹೊವಾರ್ಡ್ನಿಂದ ಪದವಿ ಪಡೆದ ನಂತರ ಮಾರಿಸನ್ ತನ್ನ ಶಿಕ್ಷಣವನ್ನು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮುಂದುವರೆಸಿದಳು. ಇವರು ವರ್ಜೀನಿಯ ವೂಲ್ಫ್ ಮತ್ತು ವಿಲಿಯಂ ಫಾಕ್ನರ್ ಅವರ ಕೃತಿಗಳ ಬಗ್ಗೆ ತಮ್ಮ ಪ್ರಬಂಧವನ್ನು ಬರೆಯುವುದರ ಜೊತೆಗೆ ೧೯೫೫ರಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ನಂತರ ಮಾರಿಸನ್ ಟೆಕ್ಸಾಸ್ ಸದರ್ನ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಪಕಿಯಾಗಿ ಲೋನ್ ಸ್ಟಾರ್ ಸ್ಟೇಟ್‌ಗೆ ತೆರಳಿದರು.
ಟೋನಿ ಮಾರಿಸನ್ ಅವರ ಕೃತಿಗಳು
‘ದಿ ಬ್ಲೂಸ್ಟ್ ಐ’
ಮಾರಿಸನ್ ೧೯೭೦ರಲ್ಲಿ ತಮ್ಮ ಮೊದಲ ಕಾದಂಬರಿಯಾದ ದಿ ಬ್ಲೂssಸ್ಟ್ ಐ ಪ್ರಕಟಮಾಡಿದಳು. ಈಕೆ ಕ್ಯಾಥೊಲಿಕ್ ಚರ್ಚ್ಗೆ ಸೇರಿದ ನಂತರ ಸೇಂಟ್ ಆಂಥೋನಿ ಅವರಿಂದ ‘ಟೋನಿ’ ಎಂಬ ಅಡ್ಡ ಹೆಸರನ್ನು ಪಡೆದು ಅದನ್ನು ತನ್ನ ಸಾಹಿತ್ಯಿಕ ವಲಯದಲ್ಲಿ ಬಳಸಲು ಪ್ರಾರಂಭಿಸಿದಳು. ಈ ಪುಸ್ತಕವು ಆಫ್ರಿಕಾದ ಅಮೇರಿಕನ್ ಯುವತಿಯಾದ ಪೆಕೊಲಾ ಬ್ರೀಡ್‌ಲೋವ್‌ನ ಬಗ್ಗೆ ತಿಳಿಸುತ್ತದೆ. ಆದರೆ ಈ ಪುಸ್ತಕವು ಹಲವಾರು ವಿವಾದಾತ್ಮಕತೆಗಳಿಂದಾಗಿ ಹೆಚ್ಚು ಮಾರಾಟವಾಗಲಿಲ್ಲ.
‘ಸುಲಾ’
ಮೋರಿಸನ್ ಆಫ್ರಿಕನ್ ಅಮೇರಿಕನ್ ಅನುಭವವನ್ನು ಹಾಗೂ ಅದರ ಅನೇಕ ರೂಪಗಳನ್ನು ತನ್ನ ಕೃತಿಗಳಲ್ಲಿ ಅನ್ವೇಷಿಸುತ್ತಾ ಬಂದಳು. ಮುಂದಿನ ಕಾದಂಬರಿ ಸೂಲಾ (೧೯೭೩) ಓಹಿಯಾದಲ್ಲಿ ಬೆಳೆದ ಇಬ್ಬರು ಮಹಿಳೆಯರ ಸ್ನೇಹದ ಮೂಲಕ ಒಳ್ಳೆಯದು ಕೆಟ್ಟದ್ದನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ ಈ ಕಾದಂಬರಿಯು ಅವರನ್ನು ಅಮೇರಿಕನ್ ಪುಸ್ತಕ ಪ್ರಶಸ್ತಿಗೆ ಆಯ್ಕೆ ಮಾಡಿಸಿತು.
‘ಸಾಂಗ್ ಆಫ್ ಸೊಲೊಮನ್’
ಸಾಂಗ್ ಆಫ್ ಸೊಲೊಮನ್ (೧೯೭೭) ಕೃತಿಯು ಬುಕ್ ಆಫ್ ದಿ ಮಂತ್ ಕ್ಲಬ್‌ನಲ್ಲಿ ವೈಶಿಷ್ಟö್ಯಪೂರ್ಣವಾಗಿ ಆಯ್ಕೆಯಾದ ಮೊದಲ ಕೃತಿಯಾಗಿದೆ. ಇದು ಭಾವಗೀತಾತ್ಮಕ ಕಥೆಯನ್ನು ಒಳಗೊಂಡಿದೆ. ಮಿಲ್ಕ್ ವೆಸ್ಟರ್ನ್ ಅರ್ಬನ್ ಡೆನಿಜನ್ ಮಿಲ್ಕö್ಮನ್ ಡೆಡ್ ಅವರ ಪ್ರಣಯವನ್ನು ತಿಳಿಸುತ್ತ, ಅವರ ಕುಟುಂಬದ ವಿಚಾರಗಳ ಜೊತೆಗೆ ಅಂದಿನ ಪ್ರಪಂಚದ ಕಠಿಣ ವಾಸ್ತವತೆಗಳನ್ನು ಅರ್ಥಮಾಡಿಸುತ್ತದೆ. ಮಾರಿಸನ್ ಅವರ ಈ ಕಾದಂಬರಿಗೆ ಹಲವಾರು ಪ್ರಶಸ್ತಿಗಳು ಬಂದವು. ಇದು ರಾಷ್ಟಿçÃಯ ಪುಸ್ತಕ ವಿಮರ್ಶಕರ ವಲಯ ಪ್ರಶಸ್ತಿಯನ್ನು ಗೆದ್ದುಕೊಂಡಿತು ಹಾಗೂ ಸಹೃದಯರ ಮನಸ್ಸಿನಲ್ಲಿ ದೀರ್ಘಾಕಾಲ ಉಳಿದ ಅವರ ಪ್ರಮುಖ ಕೃತಿಯಾಗಿದೆ.
ಪುಲಿಟ್ಜೆರ್ ಪಾರ್ ಬಿಲವುಡ್
ಉದಯೋನ್ಮುಖ ಸಾಹಿತ್ಯ ತಾರೆ ಮೋರಿಸನ್ ಅವರನ್ನು ೧೯೮೦ರಲ್ಲಿ ನ್ಯಾಷನಲ್ ಕೌನ್ಸಿಲ್ ಆನ್ ದಿ ಆಟರ್ಸ್ಗೆ ನೇಮಿಸಲಾಯಿತು. ಮುಂದಿನ ವರ್ಷ ಟಾರ್ ಬೇಬಿ ಪ್ರಕಟವಾಯಿತು. ಇದು ಕೆರಿಬಿಯನ್ ಮೂಲದ ಕಾದಂಬರಿ ಮತ್ತು ಜಾನಪದ ಕಥೆಗಳಿಂದ ಸ್ವಲ್ಪ ಸ್ಪೂರ್ತಿ ಪಡೆಯಿತು. ಆದರೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಅವರ ಮುಂದಿನ ಕೃತಿ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದಾಗಿದೆ. ನೈಜ ಪ್ರಪಂಚದ ವ್ಯಕ್ತಿಯಾದ ಮಾರ್ಗರೆಟ್ ಗಾರ್ನರ್ ಅವರಿಂದ ಪ್ರೇರಿತರಾಗಿ ಬರೆದದ್ದು. ಮಾಜಿ ಗುಲಾಮರಾಗಿದ್ದ ಸೇಥೆ ತನ್ನ ಮಕ್ಕಳನ್ನು ಗುಲಾಮರಾಗಿ ನೋಡುವುದಕ್ಕಿಂತ ಹೆಚ್ಚಾಗಿ ಅವರನ್ನು ಕೊಲ್ಲುವ ನಿರ್ಧಾರದಿಂದ ಓದುಗರನ್ನು ಕಾಡುತ್ತಾರೆ. ಅವಳ ಮೂರು ಮಕ್ಕಳು ಬದುಕುಳಿದರು. ಆದರೆ ಆಕೆಯ ಮಗಳು ಆಕೆಯ ಕೈಯಲ್ಲಿ ಸಾಯುತ್ತಾಳೆ. ಒಟ್ಟಾರೆಯಾಗಿ ಈ ಕೃತಿಯು ಎಲ್ಲರನ್ನು ಕಾಡುತ್ತದೆ. ಮಾರಿಸನ್ ೧೯೮೮ರ ಪುಲಿಟ್ಜೆರ್ ಪ್ರಶಸ್ತಿ ಸೇರಿದಂತೆ ಹಲವಾರು ಸಾಹಿತ್ಯ ಪ್ರಶಸ್ತಿಗಳನ್ನು ಗೆದ್ದರು. ಹತ್ತು ವರ್ಷಗಳ ನಂತರ ಈ ಪುಸ್ತಕವನ್ನು ಚಲನಚಿತ್ರವಾಗಿ ಮಾಡಲಾಯಿತು. ಓಪ್ರಾ ವಿನ್ಫೆçÃ, ಥಾಂಡಿ ನ್ಯೂಟನ್ ಮತ್ತು ಡ್ಯಾನಿ ಗ್ಲೋವರ್ ನಟಿಸಿದ್ದರು.
ನೋಬೆಲ್ ಪ್ರಶಸ್ತಿ
ಮಾರಿಸನ್ ೧೯೮೯ರಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಇವರು ಪ್ಲೇಯಿಂಗ್ ಇನ್ ದ ಡಾರ್ಕ್:ವೈಟ್‌ನೆಸ್ ಮತ್ತು ಲಿಟರರಿ ಇಮ್ಯಾಜಿನೇಷನ್ (೧೯೯೨) ಸೇರಿದಂತೆ ಉತ್ತಮ ಕೃತಿಗಳನ್ನು ರಚಿಸಿದರು. ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ೧೯೯೩ರಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಆಫ್ರಿಕನ್ ಅಮೇರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರದಲ್ಲಿ ಅವರು ಜಾಝ್ ಎಂಬ ಕಾದಂಬರಿಯನ್ನು ಪ್ರಕಟಿಸಿದರು. ಇದು ೨೦ನೇ ಶತಮಾನದ ಹಾರ್ಲೆಮ್‌ನಲ್ಲಿ ವೈವಾಹಿಕ ಜೀವನದ ಪ್ರೀತಿ ಮತ್ತು ದ್ರೋಹವನ್ನು ತಿಳಿಸುತ್ತದೆ.
***
Kannada Butti – ಕನ್ನಡ ಬುಟ್ಟಿ