ಅಲೆಕ್ಸಾಂಡರ್ ದಿ ಗ್ರೇಟ್ [Alexander the Great] (ಕ್ರಿ.ಪೂ. 356-323)

ಅಲೆಕ್ಸಾಂಡರ್ ಪ್ರಪಂಚದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದಾನೆ. ಮ್ಯಾಸಿಡೋನಿಯಾದ ೩ನೇ ಅಲೆಕ್ಸಾಂಡರ್ ಎಂದೂ ಕರೆಯಲ್ಪಡುವ ‘ಅಲೆಕ್ಸಾಂಡರ್ ದಿ ಗ್ರೇಟ್’ ಕ್ರಿ.ಪೂ. ೩೩೬ರಿಂದ ೩೨೩ರವರೆಗೆ ಪರ್ಷಿಯನ್ ಸಾಮ್ರಾಜ್ಯದ ವಿಜಯಶಾಲಿ ಮಹಾಶಯರಾಗಿದ್ದರು. ಅಲ್ಲದೆ ಅಲೆಕ್ಸಾಂಡರ್‌ನನ್ನು ಸಾರ್ವಕಾಲಿಕ ಶ್ರೇಷ್ಠ ಮಿಲಿಟರಿ ಪ್ರತಿಭೆಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ. ಮ್ಯಾಸಿಡೋನಿಯಾದ ರಾಜ ೨ನೇ ಫಿಲಿಪ್‌ರ ಮಗನಾಗಿ ಜನಿಸಿದ ಅಲೆಕ್ಸಾಂಡರ್ ಆರಂಭಿಕ ವರ್ಷಗಳಲ್ಲಿ ತನ್ನ ತಂದೆಯ ಆಡಳಿತವನ್ನು ಗಮನಿಸುತ್ತಾ ಬೆಳೆದನು. ಅವನ ತಂದೆ ಮ್ಯಾಸಿಡೋನಿಯಾವನ್ನು ಒಂದು ದೊಡ್ಡ ಮಿಲಿಟರಿ ಶಕ್ತಿಯಾಗಿ ಹೇಗೆ ಪರಿವರ್ತಿಸಿದನು ಎಂಬುದಕ್ಕೆ ಇವನು ಸಾಕ್ಷಿಯಾದನು. ತನ್ನ ತಂದೆಗೆ ಋಣಿಯಾಗಿದ್ದುದಲ್ಲದೆ ತಂದೆಗಿAತ ಹೆಚ್ಚು ಪ್ರಸಿದ್ಧನಾದನು. ಚಿಕ್ಕ ವಯಸ್ಸಿನಿಂದಲೂ ಧೈರ್ಯಶಾಲಿಯಾದ ಅಲೆಕ್ಸಾಂಡರ್ ತನ್ನ ೧೨ನೇ ವಯಸ್ಸಿನಲ್ಲಿ ಅಶಿಸ್ತಿನ ಕುದುರೆ ‘ಸ್ಟಾಲಿಯನ್’ ಅನ್ನು ಯಶಸ್ವಿಯಾಗಿ ಪಳಗಿಸುವ ಮೂಲಕ ತನ್ನ ಮೊದಲ ತನ್ನ ಪರಾಕ್ರಮವನ್ನು ಪ್ರದರ್ಶಿಸಿದನು. ಅಲೆಕ್ಸಾಂಡರ್ ಮಹಾನ್ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಅವರಿಂದ ಬೋಧನೆ ಪಡೆಯುವ ಅದೃಷ್ಟವನ್ನು ಪಡೆದನು. ತನ್ನ ಜ್ಞಾನದ ಮೇಲಿನ ಪ್ರೀತಿಯು ವಿಜ್ಞಾನ, ಔಷಧ, ಸಾಹಿತ್ಯ ಮತ್ತು ತತ್ವಶಾಸ್ತç ಕ್ಷೇತ್ರಗಳಲ್ಲಿ ಅವರ ಆಸಕ್ತಿಯನ್ನು ಉತ್ತೇಜಿಸಿತು. ಅವನ ತಂದೆಯ ಹತ್ಯೆಯ ನಂತರ ಅಲೆಕ್ಸಾಂಡರ್ ತನ್ನ ೨೦ನೇ ವಯಸ್ಸಿನಲ್ಲಿ ಸಿಂಹಾಸನವನ್ನು ಏರಿದನು. ಅವನ ತಂದೆ ದೊಡ್ಡ ವಿಜಯಶಾಲಿಯಾಗಿದ್ದರು. ನಂತರ ಅಲೆಕ್ಸಾಂಡರ್ ಕೂಡ ಅಂತಹ ಪರಂಪರೆಯನ್ನು ಮುಂದುವರಿಸಲು ನಿರ್ಧರಿಸಿದನು. ಕೂಡಲೇ ವ್ಯಾಪಕವಾದ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಪ್ರಪಂಚವನ್ನೆ ಗೆಲ್ಲುವ ಬಯಕೆ ಹೊಂದಿದ್ದನು. ಅಲೆಕ್ಸಾಂಡರ್ ತನ್ನ ೩೦ನೇ ವರ್ಷದ ಹೊತ್ತಿಗೆ ಮ್ಯಾಸಿಡೋನಿಯಾ ಸಾಮ್ರಾಜ್ಯವನ್ನು ಪ್ರಾಚೀನ ಜಗತ್ತಿನ ಅತಿದೊಡ್ಡ ಸಾಮ್ರಾಜ್ಯಗಳಲ್ಲಿ ಒಂದನ್ನಾಗಿ ಪರಿವರ್ತಿಸಿದನು.

ಬಾಲ್ಯ ಮತ್ತು ಆರಂಭಿಕ ಜೀವನ

ಅಲೆಕ್ಸಾಂಡರ್ ಕ್ರಿ.ಪೂ. ೩೫೬ರ ಜುಲೈ ೨೦ ರಂದು ಮ್ಯಾಸಿಡೋನ್ ಸಾಮ್ರಾಜ್ಯದ ರಾಜಧಾನಿಯಾದ ‘ಪೆಲ್ಲಾ’ದಲ್ಲಿ ಜನಿಸಿದನೆಂದು ನಂಬಲಾಗಿದೆ. ಅಲೆಕ್ಸಾಂಡರ್ ಮ್ಯಾಸಿಡೋನ್ ರಾಜ ೨ನೇ ಫಿಲಿಪ್ ಮತ್ತು ಅವರ ನಾಲ್ಕನೇ ಹೆಂಡತಿ ಒಲಿಂಪಿಯಾಸ್‌ರ ಮಗನಾಗಿ ಜನಿಸಿದನು. ಅವನ ತಾಯಿ ಎಪಿರಸ್‌ನ ರಾಜ ೧ನೇ ನಿಯೋಪ್ಟೋಲೆಮಸ್‌ರ ಮಗಳು. ಅವರು ಆ ಯುಗದಲ್ಲಿ ಉದಾತ್ತ ಜನ್ಮ ಪುತ್ರರಿಗೆ ವಿಶಿಷ್ಟವಾದಂತೆ ಓದುವ, ಬರೆಯುವ, ಸವಾರಿ ಮಾಡುವ, ಹೋರಾಡುವ ಮತ್ತು ಬೇಟೆಯಾಡುವ ಕಲೆಗಳ ಬಗ್ಗೆ ತರಭೇತಿ ಕೊಡಿಸಿದರು. ಆದ್ದರಿಂದ ಅವನು ಧೈರ್ಯಶಾಲಿ ಹುಡುಗನಾಗಿ ಬೆಳೆದನು. ಅವನು ತನ್ನ ತಂದೆ ೨ನೇ ಫಿಲಿಪ್‌ಗೆ ಹೆಚ್ಚು ಋಣಿಯಾಗಿದ್ದನು. ಕೇವಲ ೧೨ ವರ್ಷದವನಿದ್ದಾಗ ಅಶಿಸ್ತಿನ ಕುದುರೆ ಸ್ಟಾಲಿಯನ್ ಅನ್ನು ಪಳಗಿಸಿ ಅದಕ್ಕೆ ‘ಬುಸೆಫಾಲಸ್’ ಎಂಬ ಹೆಸರನ್ನು ನೀಡಿ ತನ್ನ ನೆಚ್ಚಿನ ಕುದುರೆಯನ್ನಾಗಿ ಮಾಡಿಕೊಂಡನು. ಅದು ಅಲ್ಲಿಂದ ಹಲವಾರು ವರ್ಷಗಳ ಕಾಲ ಅವನಿಗೆ ಸೇವೆ ಸಲ್ಲಿಸಿತು.

ರಾಜ ಫಿಲಿಪ್‌ನು ಮಹಾನ್ ತತ್ವಜ್ಞಾನಿ ಅರಿಸ್ಟಾಟಲ್‌ನನ್ನು ತಮ್ಮ ಮಗ ಅಲೆಕ್ಸಾಂಡರ್‌ನಿಗೆ ಶಿಕ್ಷಣ ಕಲಿಸುವಂತೆ ಕೇಳಿಕೊಂಡನು. ಇದಕ್ಕೆ ಪೂರಕವಾಗಿ ಮೀಜಾದಲ್ಲಿರುವ ಅಪ್ಸರೆಗಳ ದೇವಾಲಯವನ್ನು ಅವನಿಗೆ ತರಗತಿಯಾಗಿ ಒದಗಿಸಿದನು. ಅರಿಸ್ಟಾಟಲ್‌ರು ಅಲೆಕ್ಸಾಂಡರ್ ಮತ್ತು ಮೆಸಿಡೋನಿಯನ್ ವರಿಷ್ಠರ ಮಕ್ಕಳಿಗೆ ಔಷಧಿ, ತತ್ವಶಾಸ್ತç, ನೈತಿಕತೆ, ಧರ್ಮ, ತರ್ಕ ಮತ್ತು ಕಲೆ ಮುಂತಾದ ವಿಷಯಗಳ ಬಗ್ಗೆ ಬೋಧಿಸಿದರು. ಅಲೆಕ್ಸಾಂಡರ್ ಅವರ ಗುರುಶಿಕ್ಷಣದ ಅಡಿಯಲ್ಲಿ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡರು. ಬೈಜಾಂಟಿಯನ್ ವಿರುದ್ಧ ಯುದ್ಧ ಮಾಡುವ ಸಂದರ್ಭದಲ್ಲಿ ಅವನ ತಂದೆ ಅವನನ್ನು ರಾಜಪ್ರತಿನಿಧಿಯಾಗಿ ಘೋಷಿಸಿ ಅವನಿಗೆ ರಾಜ್ಯದ ಉಸ್ತುವಾರಿಯನ್ನು ವಹಿಸಿಕೊಟ್ಟನು. ಆಗ ಅವನಿಗೆ ಕೇಲವ ೧೬ ವರ್ಷವಾಗಿತ್ತು. ಫಿಲಿಪ್‌ನ ಅನುಪಸ್ಥಿತಿಯಲ್ಲಿ ‘ಥ್ರಾಸಿಯನ್ ಮೇಡಿ’ ಮ್ಯಾಸಿಡೋನಿಯಾ ವಿರುದ್ಧ ದಂಗೆ ಎದ್ದನು. ಇನ್ನೂ ಚಿಕ್ಕ ಹುಡುಗನಾಗಿದ್ದರೂ ಅಲೆಕ್ಸಾಂಡರ್ ತ್ವರಿತವಾಗಿ ದಂಗೆಯನ್ನು ಅಡಗಿಸಿ ಧೈರ್ಯದಿಂದ ತಮ್ಮ ಪ್ರದೇಶದಿಂದ ‘ಥ್ರಾಸಿಯನ್‌ನನ್ನು ಓಡಿಸಿದನು. ಇದು ಅವನಿಗೆ ಹೆಗ್ಗಳಿಕೆಯನ್ನು ತಂದುಕೊಟ್ಟಿತು.

ಆರೋಹಣ ಮತ್ತು ಆಳ್ವಿಕೆ

ಕ್ರಿ.ಪೂ. ೩೩೬ರಲ್ಲಿ ಕಿಂಗ್ ಫಿಲಿಪ್‌ನನ್ನು ಅವನ ಅಂಗರಕ್ಷಕರ ಕ್ಯಾಪ್ಟನ್ ‘ಪೌಸಾನಿಯಸ್’ನು ಹತ್ಯೆ ಮಾಡಿದನು. ಆ ಸಮಯದಲ್ಲಿ ಕೇವಲ ೨೦ ವರ್ಷ ವಯಸ್ಸಿನ ಅಲೆಕ್ಸಾಂಡರ್‌ನನ್ನು ಗಣ್ಯರು ಮತ್ತು ಮ್ಯಾಸಿಡೋನಿಯನ್ ಸೈನ್ಯವು ರಾಜ ಎಂದು ಘೋಷಿಸಿತು. ಸಿಂಹಾಸನವನ್ನು ಏರಿದ ಕೂಡಲೇ ಅವನು ತನ್ನ ಎಲ್ಲಾ ದೇಶೀಯ ಶತ್ರುಗಳನ್ನು ಮತ್ತು ಸಿಂಹಾಸನಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳನ್ನು ಹೊರಹಾಕಿದನು. ಅಲೆಕ್ಸಾಂಡರ್‌ನಿಗೆ ಬೆದರಿಕೆಯೊಡ್ಡಿದ ಅವನ ಸೋದರಸಂಬAಧಿಗಳು ಮತ್ತು ಮಲತಾಯಿಯರನ್ನು ಗಲ್ಲಿಗೇರಿಸಲು ಅವನ ತಾಯಿ ಆದೇಶಿಸಿದಳು. ಕಿಂಗ್ ಫಿಲಿಪ್ ಸಾವಿನ ಸುದ್ದಿ ತಿಳಿದ ಕೂಡಲೆ ಥೀಬ್ಸ್, ಅಥೆನ್ಸ್, ಥೆಸಲಿ ಮತ್ತು ಮ್ಯಾಸಿಡೋನಿನ ಉತ್ತರದ ಥ್ರಾಸಿಯನ್ ಬುಡಕಟ್ಟು ಜನಾಂಗದವರು ದಂಗೆ ಎದ್ದರು. ಅಲೆಕ್ಸಾಂಡರ್ ೩,೦೦೦ ಸೈನಿಕರನ್ನೊಳಗೊಂಡ ಮೆಸಿಡೋನಿಯನ್ ಅಶ್ವಸೈನ್ಯವನ್ನು ಒಟ್ಟುಗೂಡಿಸಿ ಥೆಸಲಿಯ ಸೈನ್ಯವನ್ನು ಶರಣಾಗುವಂತೆ ಮಾಡಿದನು. ಮುಂದೆ ಥ್ರಾಸಿಯನ್ ಬುಡಕಟ್ಟು ಜನಾಂಗವನ್ನು ಸೋಲಿಸುವಲ್ಲಿ ಯಶಸ್ವಿಯಾದನು.
ಕ್ರಿ.ಪೂ. ೩೩೪ರಲ್ಲಿ ಅಲೆಕ್ಸಾಂಡರ್ ತನ್ನ ೩೫,೦೦೦ ಸೈನಿಕರ ಪಡೆಯೊಂದಿಗೆ ‘ಗ್ರಾನಿಕಸ್ ನದಿಯ ಕದನ’ದಲ್ಲಿ ಪರ್ಷಿಯನ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ. ದೊಡ್ಡ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಿದ ಅವನು ಏಷ್ಯಾ ಮೈನರ್‌ನ ಪರ್ಷಿಯನ್ ಸ್ಯಾಟ್ರಾಪ್ ಪಡೆಗಳನ್ನು ಸೋಲಿಸಿದನು. ಈ ವಿಜಯದ ನಂತರ ಪರ್ಷಿಯನ್ ಪ್ರಾಂತೀಯ ರಾಜಧಾನಿ ಮತ್ತು ಸಾರ್ಡಿಸ್ ಪಡೆ ಈತನಿಗೆ ಶರಣಾಯಿತು. ಕ್ರಿ.ಪೂ. ೩೩೩ರಲ್ಲಿ ವಾಯುವ್ಯ ಸಿರಿಯಾದ ಇಸಸ್‌ನ ಪರ್ವತದ ತಪ್ಪಲಿನಲ್ಲಿ ಅಲೆಕ್ಸಾಂಡರ್‌ನ ಮೆಸಿಡೋನಿಯನ್ ಸೈನ್ಯವು ರಾಜ ೩ನೇ ಡೇರಿಯಸ್‌ರ ನೇತೃತ್ವದಲ್ಲಿ ಪರ್ಷಿಯನ್ ಪಡೆಗಳನ್ನು ಎದುರಿಸಿತು. ಡೇರಿಯಸ್‌ನ ಸೈನ್ಯವು ಅಲೆಕ್ಸಾಂಡರ್‌ನ ಸೈನ್ಯದ ಸಂಖ್ಯೆಯನ್ನು ಮೀರಿಸಿದ್ದರೂ ಸಹ ‘ಬ್ಯಾಟಲ್ ಆಫ್ ಐಸಸ್’ ಎಂದು ಕರೆಯಲ್ಪಡುವ ಈ ಕದನ ಅಲೆಕ್ಸಾಂಡರ್‌ನಿಗೆ ದೊಡ್ಡ ಜಯವನ್ನು ತಂದುಕೊಟ್ಟಿತು.
ಯುದ್ಧದ ನಂತರ ಅಲೆಕ್ಸಾಂಡರ್‌ನು ಡೇರಿಯಸ್‌ನ ಹೆಂಡತಿ ೧ನೇ ಸ್ಟೇಟೈರಾ ಮತ್ತು ಅವನ ಹೆಣ್ಣುಮಕ್ಕಳಾದ ೨ನೇ ಸ್ಟೇಟೈರಾ ಮತ್ತು ಡ್ರೆöÊಪೆಟಿಸ್ ಮತ್ತು ಅವನ ತಾಯಿ ಸಿಸಿಗಾಂಬಿಸ್‌ಳನ್ನು ಸೆರೆಹಿಡಿದನು. ನಂತರ ಎಲ್ಲ ಮಹಿಳೆಯರನ್ನು ಬಹಳ ಗೌರವದಿಂದ ನಡೆಸಿಕೊಂಡನು. ಮುಂದೆ ಅರಬೆಲ್ ಯುದ್ಧದಲ್ಲಿಯೂ ಸಹ ಜಯ ಪಡೆದನು. ಕ್ರಿ.ಪೂ. ೩೩೧ರ ಆರಂಭದಲ್ಲಿ ಅಲೆಕ್ಸಾಂಡರ್ ಈಜಿಪ್ಟ್ ಪ್ರವೇಶಿಸಿದನು. ಅವರು ಈಜಿಪ್ಟ್ಗೆ ಹೋಗುವಾಗ ‘ಗಾಜಾ’ದ ಮೇಲೆ ಮುತ್ತಿಗೆ ಹಾಕಿ ಈಜಿಪ್ಟ್ನ್ನು ಬಹಳ ಸುಲಭವಾಗಿ ವಶಪಡಿಸಿಕೊಂಡನು. ಈಜಿಪ್ಟ್ನಲ್ಲಿ ಅಲೆಕ್ಸಾಂಡರ್ ಗ್ರೀಕ್ ಸಂಸ್ಕೃತಿ ಮತ್ತು ವಾಣಿಜ್ಯ ಕೇಂದ್ರವನ್ನು ವಿನ್ಯಾಸಗೊಳಿಸಿ ‘ಅಲೆಕ್ಸಾಂಡ್ರಿಯಾ-ಬೈ-ಈಜಿಪ್ಟ್’ ಅಥವಾ ‘ಅಲೆಕ್ಸಾಂಡ್ರಿಯಾ’ ಎಂಬ ನಗರವನ್ನು ನಿರ್ಮಿಸಿದನು.
ಈ ಎಲ್ಲಾ ಯಶಸ್ಸುಗಳಿಂದ ಪ್ರೇರಿತನಾಗಿ ಭಾರತದ ಮೇಲೆ ದಾಳಿ ಮಾಡಲು ಕಾರಕೋರಂ ಪರ್ವತ ಶ್ರೇಣಿಗಳ ಮೂಲಕ ಸಾಗಲು ಯೋಜಿಸಿದನು. ಕ್ರಿ.ಪೂ. ೩೨೭ರಲ್ಲಿ ಅಲೆಕ್ಸಾಂಡರ್ ಮತ್ತು ಅವನ ಸೈನ್ಯ ಭಾರತಕ್ಕೆ ದಂಡಯಾತ್ರೆ ಕೈಗೊಂಡು ವಾಯುವ್ಯ ಭಾರತದ ಉಪಖಂಡಕ್ಕೆ(ಇAದಿನ ಪಾಕಿಸ್ತಾನ) ಅಭಿಯಾನವನ್ನು ಪ್ರಾರಂಭಿಸಿದರು. ಈ ಹೊತ್ತಿಗೆ ಅಲೆಕ್ಸಾಂಡರ್ ಬಹಳ ಮಹತ್ವಾಕಾಂಕ್ಷೆಯಿAದ ಇಡೀ ವಿಶ್ವವನ್ನೆ ಗೆಲ್ಲುವ ಯೋಜನೆಯನ್ನು ಹೊಂದಿದ್ದನು. ಆದರೆ ಅದು ವಾಯುವ್ಯ ಭಾರತದಲ್ಲಿ ಕೊನೆಗೊಂಡಿತು ಎಂದು ಗ್ರೀಕರು ಭಾವಿಸಿದ್ದಾರೆ. ಕ್ರಿ.ಪೂ. ೩೨೬ರಲ್ಲಿ ಪಂಜಾಬ್‌ನ ಹೈಡಾಸ್ಪೆಸ್ ನದಿಯ ದಡದಲ್ಲಿ ಪೌರವಾ ಸಾಮ್ರಾಜ್ಯದ ರಾಜ ‘ಪೊರಸ್’ ವಿರುದ್ಧದ ‘ಹೈಡಾಸ್ಪೆಸ್ ಕದನ’ ಅಥವಾ ಜೇಲಂ (ಕ್ರಿ.ಪೂ. ೩೨೬) ಯುದ್ಧವು ಭಾರತದಲ್ಲಿ ನಡೆದ ಅಲೆಕ್ಸಾಂಡರ್ ಯುದ್ಧಗಳಲ್ಲಿ ಅತ್ಯಂತ ಶ್ರೇಷ್ಠವಾದುದು. ಇದರಲ್ಲಿ ಮ್ಯಾಸಿಡೋನಿಯನ್ನರು ವಿಜಯಶಾಲಿಯಾಗಿ ಪಂಜಾಬ್ ಅನ್ನು ಸ್ವಾಧೀನಪಡಿಸಿಕೊಂಡರು. ನಂತರ ಅವರು ಭಾರತದಲ್ಲಿ ಮತ್ತಷ್ಟು ವಿಜಯ ಸಾದಿಸಲು ಬಯಸಿದ್ದರು. ಗಂಗಾ ನದಿಯ ಪೂರ್ವಕ್ಕಿದ್ದ ಮಗಧ ರಾಜ್ಯದ ನಂದ ಸಾಮ್ರಾಜ್ಯವನ್ನು ಗೆಲ್ಲುವ ಮಹತ್ವಾಕಾಂಕ್ಷೆಯೊAದಿಗೆ ಅಲಡಕ್ಸಾಂಡರ್ ಮುನ್ನುಗ್ಗಿದ್ದನು. ಸಿಂದೂ ನದಿಯನ್ನು ದಾಟಿ ಬಂದನಾದರೂ ಭಾರತದ ದಾಳಿಯನ್ನು ದಿಗ್ವಿಜಯವಾಗಿ ಪರಿವರ್ತಿಸಲಾಗಲಿಲ್ಲ. ಆದಾಗ್ಯೂ ಅವನ ಸೈನ್ಯವು ವರ್ಷಗಳ ಸತತ ಹೋರಾಟದಿಂದ ದಣಿದಿದ್ದರಿಂದ ಮತ್ತಷ್ಟು ದಂಡಯಾತ್ರೆ ಕೈಗೊಳ್ಳಲು ನಿರಾಕರಿಸಿತು ಹಾಗೂ ನಂದರ ಸೈನ್ಯಕ್ಕೆ ಹೆದರಿತು. ದಂಡೆಯಾತ್ರೆಯನ್ನು ಮುಂದುವರಿಸಲು ಸೈನಿಕರನ್ನು ಪ್ರೇರೇಪಿಸಲು ಅವನು ಮಾಡಿದ ಪ್ರಯತ್ನಗಳು ವ್ಯರ್ಥವಾದವು. ತನ್ನ ಜನರಲ್ ಕೊಯೆನಸ್‌ನ ಮನವಿಗೋಗೊಟ್ಟು ಅದಕ್ಕೆ ಪ್ರತಿಕ್ರಿಯೆಯಾಗಿ ಅಲೆಕ್ಸಾಂಡರ್ ಮನೆಗೆ ಮರಳಲು ನಿರ್ಧರಿಸಿದನು.
ಬ್ಯಾಬಿಲೋನ್‌ಗೆ ಹಿಂತಿರುಗಿ ಅಲೆಕ್ಸಾಂಡರ್ ಹೊಸ ಅಭಿಯಾನಗಳ ಯೋಜನೆಗಳನ್ನು ರೂಪಿಸಲು ಪ್ರಾರಂಭಿಸಿದ. ಆದರೆ ಕೆಲವು ದಿನಗಳಲ್ಲೇ ಅಲೆಕ್ಸಾಂಡರ್ ಮರಣ ಹೊಂದಿದ್ದರಿAದ ಮತ್ತೊಂದು ಅಭಿಯಾನವನ್ನು ಕೈಗೊಳ್ಳುವ ಅವಕಾಶವನ್ನು ಎಂದಿಗೂ ಪಡೆಯಲಿಲ್ಲ. ಅಧಿಕಾರದ ಉಚ್ಛಾçಯ ಸ್ಥಿತಿಯಲ್ಲಿದ್ದಾಗ ಜ್ವರದಿಂದ ಬಳಲಿ ತನ್ನ ೩೩ನೇ ವಯಸ್ಸಿನಲ್ಲಿ (ಕ್ರಿ.ಪೂ. ೩೨೩) ಮರಣ ಹೊಂದಿದನು.
ಆದಾಗ್ಯೂ ಅಲೆಕ್ಸಾಂಡರ್ ದಿ ಗ್ರೇಟ್‌ನು ಇತಿಹಾಸದ ಅತ್ಯಂತ ಯಶಸ್ವಿ ಮಿಲಿಟರಿ ಕಮಾಂಡರ್‌ಗಳಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ಪ್ರಾಚೀನ ಜಗತ್ತಿನ ಅತಿದೊಡ್ಡ ಸಾಮ್ರಾಜ್ಯಗಳಲ್ಲಿ ಒಂದನ್ನು ಸೃಷ್ಟಿಸಿದ ಕೀರ್ತಿಗೆ ಅವನು ಪಾತ್ರನಾಗಿದ್ದಾನೆ. ಗ್ರೀಕರನ್ನು ಪರ್ಷಿಯಾದ ವಿಜಯದಲ್ಲಿ ಮುನ್ನಡೆಸಿ  ಹಲವಾರು ವರ್ಷಗಳ ಕಾಲ ಯುದ್ಧ ಮಾಡಿದ ನಂತರ ಅಂತಿಮವಾಗಿ ಪರ್ಷಿಯನ್ ರಾಜ ೩ನೇ ಡೇರಿಯಸ್‌ನನ್ನು ಉರುಳಿಸಿದನು ಮತ್ತು ಅಖೆಮೆನಿಡ್ ಸಾಮ್ರಾಜ್ಯವನ್ನು ವಶಪಡಿಸಿಕೊಂಡನು.
ವೈಯಕ್ತಿಕ ಜೀವನ 
ಅವನು ಬ್ಯಾಕ್ಟೀರಿಯಾದ ಕುಲೀನ ಆಕ್ಸಿಯಾರ್‌ಟೆಸ್‌ನ ಮಗಳಾದ ರೊಕ್ಸಾನಾಳನ್ನು ಪ್ರೀತಿಸಿ ಮದುವೆಯಾದನು. ಅವನ ಇನ್ನೊಬ್ಬ ಹೆಂಡತಿ, ೨ನೇ ಸ್ಟೇಟೀರಾ, ಪರ್ಷಿಯನ್ ರಾಜಕುಮಾರಿ ಮತ್ತು ಪರ್ಷಿಯಾದ ೩ನೇ ಡೇರಿಯಸ್‌ನ ಮಗಳು. ಅವರು ರಾಜಕೀಯ ಕಾರಣಗಳಿಗಾಗಿ ವಿವಾಹವಾದರು. ಅವನು ಸಾವನ್ನಪ್ಪಿದ ಕೆಲವು ತಿಂಗಳ ನಂತರ ರೊಕ್ಸಾನಾ ತನ್ನ ಮಗನಿಗೆ ಜನ್ಮ ನೀಡಿದಳು. ಕ್ರಿ.ಪೂ. ೩೨೩ರ ಜೂನ್‌ನಲ್ಲಿ ಅಲೆಕ್ಸಾಂಡರ್ ತನ್ನ ೩೩ನೇ ವಯಸ್ಸಿನಲ್ಲಿ ಬ್ಯಾಬಿಲೋನ್‌ನ ೨ನೇ ನೆಬುಖಡ್ನೇಜರ್‌ನ ಅರಮನೆಯಲ್ಲಿ ಮರಣ ಹೊಂದಿದನು. ಅವನ ಸಾವಿನ ಸುತ್ತಲಿನ ವಿವರಗಳು ಅಸ್ಪಷ್ಟವಾಗಿವೆ. ಒಂದು ಮಾಹಿತಿಯ ಪ್ರಕಾರ ರಾತ್ರಿ ಕುಡಿದ ನಂತರ ಜ್ವರ ಬಂದು ಅದರಿಂದ ಕೆಲವು ದಿನಗಳ ನಂತರ ಅವನು ಸಾವನ್ನಪ್ಪಿದನು ಎಂದು ಹೇಳುತ್ತದೆ. ಮತ್ತೊಂದರ ಪ್ರಕಾರ ಅವನು ಮಿಶ್ರಣವಿಲ್ಲದ ವೈನ್ ಕುಡಿದ ಪರಿಣಾಮ ದುರ್ಬಲರಾಗಿ ಸಂಕಟದಿAದ ಸತ್ತನೆಂದು ಹೇಳಲಾಗಿದೆ. ಇವನ ಮರಣದ ನಂತರ ೪೦ ವರ್ಷಗಳ ಕಾಲ ಆಂತರಿಕ ಯುದ್ಧ ನಡೆದು ಈತನ ಸಾಮ್ರಾಜ್ಯ ಸೆಲ್ಯೂಕಸ್, ಟಾಲೆಮಿ ಮತ್ತು ಆಂಟಿಗೊನಸ್ ನೇತೃತ್ವದಲ್ಲಿ ಮೂರು ಭಾಗಗಳಾಗಿ ವಿಭಜನೆಗೊಂಡಿತು.