ಪ್ರಪಂಚದ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳ ಬಗ್ಗೆ ಇಂದಿಗೂ ಸಾಮಾನ್ಯ ಜನರು ಸ್ಮರಿಸುತ್ತಾರೆಂದರೆ ಅವರು ಪ್ರಥಮ ದರ್ಜೆಯ ನಾಯಕರಾಗಿರುತ್ತಾರೆ. ಅವರ ಸಾಧನೆ ಅತ್ಯುತ್ತಮವಾಗಿರುತ್ತದೆ. ಆ ನಾಯಕರು ತಮ್ಮ ರಂಗದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿದ್ದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ. ಆದರೆ ನಮ್ಮ ಸಮಾಜದ ಒಳಿತಿಗಾಗಿ ಕೇವಲ ಪ್ರಥಮ ದರ್ಜೆ ನಾಯಕರಲ್ಲದೆ ದ್ವಿತೀಯ ಹಾಗೂ ತೃತೀಯ ದರ್ಜೆ ನಾಯಕರು ಸಹ ತಮ್ಮದೇ ಆದ ಕೊಡುಗೆಯನ್ನು ನೀಡಿರುತ್ತಾರೆ. ಅವರೆಲ್ಲರು ತಮ್ಮ ಅದ್ವಿತೀಯ ಕಾರ್ಯಗಳು, ಸತತ ಪರಿಶ್ರಮ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಉನ್ನತ ಹುದ್ದೆಗೇರಿ ಜನರ ಒಳಿತಿಗಾಗಿ ಶ್ರಮಿಸಿರುತ್ತಾರೆ. ಪ್ರಸ್ತುತ ದಳಪತಿ ಪುಸ್ತಕದಲ್ಲಿ ಅಂತಹ ಹಲವಾರು ದ್ವಿತೀಯ, ತೃತೀಯ ಹಾಗೂ ಇತರೆ ಪ್ರಮುಖ ನಾಯಕರ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸಿರುತ್ತೇನೆ.