ಆಲಿವರ್ ಕ್ರೋಮ್ವೆಲ್ (Oliver Cromwell) ಒಬ್ಬ ಇಂಗ್ಲಿಷ್ ಮಿಲಿಟರಿ ಅಧಿಕಾರಿ ಮತ್ತು ಖ್ಯಾತ ರಾಜಕೀಯ ನಾಯಕ. ಹಂಟಿಂಗ್ ಡನ್ ನ ಸಂಸತ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಈತ ಇಂಗ್ಲೆಂಡ್ ರಾಜ ಚಾರ್ಲ್ಸ್ ಸಂಸತ್ತನ್ನು ವಿಸರ್ಜಿಸಿದ ನಂತರ ಯುವ ಸಂಸತ್ತು ಮತ್ತು ದೀರ್ಘ ಸಂಸತ್ತಿಗೆ ಸಂಸದರಾಗಿ ಆಯ್ಕೆಯಾದನು. ಕೇಂಬ್ರಿಡ್ಜ್ ಶೈರ್ನಲ್ಲಿ ರಾಜ ಮತ್ತು ಸಂಸದರ ನಡುವಿನ ಸಶಸ್ತ್ರ ಸಂಘರ್ಷದ ಸಮಯದಲ್ಲಿ ಸಂಸದೀಯ ಪಡೆಗಳ ಅಶ್ವಸೈನ್ಯಕ್ಕೆ ನೇಮಕಗೊಂಡನು. ಮೊದಲ ಅಂತರ್ಯುದ್ಧ ಪ್ರಾರಂಭವಾದಾಗ ಅವನನ್ನು ಅಶ್ವ ಸೈನ್ಯದ ಕ್ಯಾಪ್ಟನ್ ಆಗಿ ನೇಮಕ ಮಾಡಿದರು. ನಂತರ ‘ಕರ್ನಲ್ ಆಫ್ ಹಾರ್ಸಸ್’ಮತ್ತುಅಶ್ವದಳದ ಲೆಫ್ಟಿನೆಂಟ್ ಜನರಲ್ ಆಗಿ ಆಯ್ಕೆಮಾಡಿ ಕೊನೆಗೆ ‘ಎಲಿ’ ಪ್ರದೇಶದ ಗವರ್ನರ್ ಆಗಿ ನೇಮಿಸಿ ಅಧಿಕಾರ ನೀಡಿದರು. ಕ್ರೋಮ್ವೆಲ್ ಅನೇಕ ಯುದ್ಧಗಳಲ್ಲಿ ಅದ್ಭುತ ವಿಜಯಗಳನ್ನು ಸಾಧಿಸಿದನು. ಸಂಸತ್ತು ಸ್ವಯಂ ನಿರಾಕರಣೆ ಸುಗ್ರೀವಾಜ್ಞೆಯನ್ನು ಅಂಗೀಕರಿಸಿದಾಗ ಆತ ಹೊಸ ಮಾದರಿ ಸೈನ್ಯವನ್ನು ರೂಪಿಸಿದನು. ಅವನು ನಡೆಸಿದ ಯುದ್ಧಗಳು ಇಂಗ್ಲೆಂಡ್ ಇತಿಹಾಸದಲ್ಲಿ ಅತ್ಯಂತ ರಕ್ತಸಿಕ್ತವಾಗಿದ್ದವು. ಧಾರ್ಮಿಕ ಸಹಿಷ್ಣುತೆಯಲ್ಲಿ ನಂಬಿಕೆಯಿಟ್ಟಿದ್ದ ಆಲಿವರ್ ಕ್ರೋಮ್ವೆಲ್ (Oliver Cromwell) ಇಂಗ್ಲೆಂಡಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿ ಬೆಳೆದನು. ಒಂದನೇ ಚಾರ್ಲ್ಸ್ ನ ಡೆತ್ ವಾರಂಟ್ಗೆ ಸಹಿ ಹಾಕಿದ 59 ಸಂಸತ್ ಸದಸ್ಯರಲ್ಲಿ ಈತನು ಒಬ್ಬ. ಕ್ರೋಮ್ವೆಲ್ನನ್ನು ರಾಜನನ್ನಾಗಿ ಮಾಡಲು ಅವನ ಬೆಂಬಲಿಗರು ಶಿಫಾರಸ್ಸು ಮಾಡಿದಾಗ ಅವಕಾಶವನ್ನು ನಿರಾಕರಿಸಿದನು. ಮುಂದೆ ಕ್ರೋಮ್ವೆಲ್ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ನ ಲಾರ್ಡ್ ಪ್ರೊಟೆಕ್ಟರ್ ಆದನು. ಏತನ್ಮಧ್ಯೆ ಕ್ರೋಮ್ವೆಲ್ರ ಆರೋಗ್ಯ ಕ್ಷೀಣಿಸುತ್ತಾ ಹೋಯಿತು. ಬಹುಶಃ ಆಲಿವರ್ ಕ್ರೋಮ್ವೆಲ್ (Oliver Cromwell) ಮಲೇರಿಯಾದಿಂದ ಸತ್ತನೆಂದು ಹೇಳಲಾಗುತ್ತದೆ. ಆತನ ದೇಹವನ್ನು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಸಮಾಧಿ ಮಾಡಲಾಯಿತು.
ಬಾಲ್ಯ ಮತ್ತು ಆರಂಭಿಕ ಜೀವನ
ಆಲಿವರ್ ಕ್ರೋಮ್ವೆಲ್ (Oliver Cromwell) ಏಪ್ರಿಲ್ 25, 1599 ರಂದು ರಾಬರ್ಟ್ ಕ್ರೋಮ್ವೆಲ್ ಮತ್ತು ಎಲಿಜಬೆತ್ ಸ್ಟೀವರ್ಡ್ ದಂಪತಿಗಳಿಗೆ ಜನಿಸಿದನು. ಎಂಟನೇ ಹೆನ್ರಿಯ ಮಂತ್ರಿಯಾಗಿದ್ದ ಟ್ಯೂಡರ್ ರಾಜಕಾರಣಿ ಥಾಮಸ್ ಕ್ರೋಮ್ವೆಲ್ನ ಹಿರಿಯ ಸಹೋದರಿ ಕ್ಯಾಥರೀನ್ ಕ್ರೋಮ್ವೆಲ್ ಈತನ ವಂಶಸ್ಥರು. ಸೇಂಟ್ ಜಾನ್ಸ್ ಚರ್ಚ್ ನಲ್ಲಿ ದೀಕ್ಷಾಸ್ನಾನ ಪಡೆದ ನಂತರ ಕ್ರೋಮ್ವೆಲ್ ಹಂಟಿಂಗ್ ಡನ್ ನ ಗ್ರಾಮರ್ ಶಾಲೆಗೆ ವ್ಯಾಸಂಗಕ್ಕೆ ಸೇರಿದನು. 1617 ರಲ್ಲಿ ಕೇಂಬ್ರಿಡ್ಜ್ ನ ಸಿಡ್ನಿ ಸಸೆಕ್ಸ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದು ತನ್ನ ತಂದೆಯ ಅಕಾಲಿಕ ಮರಣದಿಂದ ಪದವಿ ಪಡೆಯದೆ ಹೊರಟುಹೋದನು.
ವೃತ್ತಿ
ಆಲಿವರ್ ಕ್ರೋಮ್ವೆಲ್ (Oliver Cromwell) 1628 ರಲ್ಲಿ ಹಂಟಿಂಗ್ ಡನ್ ನ ಸಂಸತ್ ಸದಸ್ಯನಾಗಿ ಆಯ್ಕೆಯಾದನು. ಅದೇ ಸಮಯದಲ್ಲಿ ರಾಜ ಒಂದನೇ ಚಾರ್ಲ್ಸ್ ಸಂಸತ್ತಿನ ಒಪ್ಪಿಗೆಯಿಲ್ಲದೆ ತೆರಿಗೆ ವಿಧಿಸಿದನು. ಇದರಿಂದ ಸಂಸತ್ತು ಹಕ್ಕಿನ ಅರ್ಜಿಯನ್ನು ಅಂಗೀಕರಿಸಿತು. ಕೂಡಲೇ ಒಂದನೇ ಚಾರ್ಲ್ಸ್ ಸಂಸತ್ತನ್ನು ಮುಂದೂಡಿದನು. ಇದರಿಂದ ಕ್ರೋಮ್ವೆಲ್ ಖಿನ್ನತೆಗೆ ಒಳಗಾದನು. ಕೂಡಲೇ ಸೂಕ್ತ ಚಿಕಿತ್ಸೆ ಪಡೆದು ತಮ್ಮ ಆಸ್ತಿಯನ್ನು ಮಾರಿ ಸೇಂಟ್ ಈವ್ಸ್ ಗೆ ತೆರಳಿ ಕೃಷಿಯಲ್ಲಿ ತೊಡಗಿದನು. 1636 ರಲ್ಲಿ ಎಲಿ ಕ್ಯಾಥೆಡ್ರಲ್ನಲ್ಲಿ ದಶಮಾಂಶ ಸಂಗ್ರಾಹಕನಾಗಿ ಅನುವಂಶಿಕವಾಗಿ ತಮ್ಮ ಚಿಕ್ಕಪ್ಪನ ಕೆಲಸ ಪಡೆದನು. ಇದರ ಜೊತೆಗೆ ಅವರ ಆಸ್ತಿಯು ಈತನ ಕೈಸೇರಿತು. 1640ರಲ್ಲಿ ‘ಬಿಷಪ್’ ಯುದ್ಧದ ಸಮಯದಲ್ಲಿ ಹಣದ ಕೊರತೆಯಿಂದಾಗಿ 1ನೇ ಚಾರ್ಲ್ಸ್ ಯುವ ಸಂಸತ್ನ ತುರ್ತುಸಭೆ ಕರೆದನು. ಆಗ ಕ್ರೋಮ್ವೆಲ್ ಕೇಂಬ್ರಿಡ್ಜ್ ಸಂಸದನಾಗಿ ಮರಳಿದನು. ಸಭೆಯಲ್ಲಿ ಸಂಸದರು ಯುದ್ಧಕ್ಕೆ ಸಹಾಯಧನ ನೀಡಲು ನಿರಾಕರಿಸಿದರು.
ಸಂಸತ್ನ ‘1641 ರ ತ್ರೈಮಾಸಿಕ ಕಾಯಿದೆ’ ಮೂರು ವರ್ಷಗಳಿಗೊಮ್ಮೆ ಸಂಸತ್ತನ್ನು ಕರೆಯಲಾಗುವುದೆಂದು ಖಾತರಿಪಡಿಸಿತು. ಆದಾಗ್ಯೂ ದಿವಾಳಿಯಾದ ರಾಜ ‘ಬಿಷಪ್ ಯುದ್ಧ’ ಮುಗಿದ ನಂತರ ದೀರ್ಘ ಸಂಸತ್ ಸಭೆ ಕರೆದನು. ಇದರ ನಡುವೆ ಕ್ರೋಮ್ವೆಲ್ ಮತ್ತೆ ಕೇಂಬ್ರಿಡ್ಜ್ ನಿಂದ ಸಂಸತ್ ಸದಸ್ಯನಾಗಿ ಆಯ್ಕೆಯಾದನು. 1642ರಲ್ಲಿ ಸಶಸ್ತ್ರ ಸಂಘರ್ಷಕ್ಕೆ ಕಾರಣವಾದ ಸಂಸತ್ತು ಮತ್ತು ರಾಜನ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿಲ್ಲ. ನಂತರ ಕ್ರೋಮ್ವೆಲ್ ಕೇಂಬ್ರಿಡ್ಜ್ ಶೈರ್ ನಲ್ಲಿ ಸಂಸದೀಯ ಪಡೆಗೆ ಅಶ್ವ ಸೈನ್ಯವನ್ನು ನೇಮಿಸಿಕೊಂಡು ಅದಕ್ಕೆ ಕ್ಯಾಪ್ಟನ್ ಆಗಿ ಅಶ್ವ ಸೈನ್ಯವನ್ನು ಬೆಳೆಸಿ ಅನಿಶ್ಚಿತ ಯುದ್ಧದಲ್ಲಿ ಹೋರಾಡಿದನು. 1643 ರಲ್ಲಿ ಕರ್ನಲ್ ಆಫ್ ಹಾರ್ಸಸ್ ಆಗಿ ಬಡ್ತಿ ಪಡೆದ ಅವನನ್ನು ಅಶ್ವಪಡೆಯ ಲೆಫ್ಟಿನೆಂಟ್ ಜನರಲ್ ಸ್ಥಾನಕ್ಕೆ ಏರಿಸಲಾಯಿತು, ನಂತರ ‘ಎಲಿ’ ಪ್ರದೇಶದ ಗವರ್ನರ್ ಆಗಿ ನೇಮಿಸಲಾಯಿತು. ಇದರಿಂದ ಮಾಸ್ಟರ್ನ್ ಮೂರ್ನಲ್ಲಿ ಸಂಸದೀಯ ಪಡೆ ಗೆಲುವು ಪಡೆಯಲು ಸಹಾಯ ಮಾಡಿದನು.
ಆಲಿವರ್ ಕ್ರೋಮ್ವೆಲ್ (Oliver Cromwell) 1644 ರ ‘ಎರಡನೇ ನ್ಯೂಬರಿ ಕದನ’ದಲ್ಲಿ ರಾಯಲಿಸ್ಟ್ ಗಳನ್ನು ಅನಾಯಾಸವಾಗಿ ಸೋಲಿಸಿದನು. ನಂತರ ಮ್ಯಾಂಚೆಸ್ಟರ್ ಮತ್ತು ಅರ್ಲ್ ಆಫ್ ಎಸೆಕ್ಸ್ ನಾಯಕತ್ವಕ್ಕೆ ಸಂಬಂಧಪಟ್ಟ ತಮ್ಮ ದೂರನ್ನು ಹೌಸ್ ಆಫ್ ಕಾಮನ್ಸ್ ಗೆ ಸಲ್ಲಿಸಿದನು. 1645 ರಲ್ಲಿ ಸಂಸತ್ತು ಸ್ವಯಂ ನಿರಾಕರಣೆ ಸುಗ್ರೀವಾಜ್ಞೆಯನ್ನು ಅಂಗೀಕರಿಸಿತು. ಹೌಸ್ ಆಫ್ ಕಾಮನ್ಸ್ ಮತ್ತು ಲಾರ್ಡ್ಸ್ ನ ಸದಸ್ಯರು ಸಿವಿಲ್ ಆಫೀಸ್ ಮತ್ತು ಮಿಲಿಟರಿ ನಡುವೆ ಸಮನ್ವಯ ಸಾದಿಸಲು ಮತ್ತು ಸೈನ್ಯವನ್ನು ಮರುರೂಪಿಸಲು ಈತನನ್ನು ಆಯ್ಕೆಮಾಡಿದರು. 1645 ರಲ್ಲಿ ನಡೆದ ‘ನಾಸ್ಬಿ’ ಕದನದಲ್ಲಿಈತನ ಹೊಸ ಮಾದರಿ ಸೈನ್ಯವು ರಾಜನ ಸೈನ್ಯವನ್ನು ಹತ್ತಿಕ್ಕಿತು. ಕ್ರೋಮ್ವೆಲ್ ಅಶ್ವಸೈನ್ಯಕ್ಕೆ ಲೆಫ್ಟಿನೆಂಟ್ ಜನರಲ್ ಆಗಿ ನೇಮಕಗೊಂಡ ಕೂಡಲೇ ರಾಯಲಿಸ್ಟ್ ಅಶ್ವಸೈನ್ಯವನ್ನು ಹಿಮ್ಮೆಟ್ಟಿಸಿದನು. ನಂತರ ಕ್ಯಾಥೊಲಿಕ್ ಕೋಟೆ ಬೇಸಿಂಗ್ ಹೌಸ್ಗೆ ಮುತ್ತಿಗೆ ಹಾಕಿದನು.
ರಾಜ ಚಾರ್ಲ್ಸ್ 1645 ರಲ್ಲಿ ಸ್ಕಾಟ್ಸ್ ಗೆ ಶರಣಾಗಿ ಇಂಗ್ಲೆಂಡಿನಿಂದ ಹಿಂದೆ ಸರಿದನು. ಸ್ಕಾಟ್ಸ್ ಗೆ ಶರಣಾದ ಚಾರ್ಲ್ಸ್ ನನ್ನು ಸಂಸದರಿಗೆ ಒಪ್ಪಿಸಲಾಯಿತು. ಇದರೊಂದಿಗೆ ಇಂಗ್ಲೆಂಡ್ ಅಂತರ್ಯುದ್ಧವನ್ನು ಕೊನೆಗೊಳಿಸಿತು. ದಿನಕಳೆದಂತೆ ಕ್ರೋಮ್ವೆಲ್ ಅನಾರೋಗ್ಯಕ್ಕೆ ಒಳಗಾಗಿ ಒಂದು ತಿಂಗಳು ನಿಷ್ಕ್ರಿಯನಾಗಿ ಚಿಕಿತ್ಸೆ ಪಡೆದನು. ಆ ಸಮಯದಲ್ಲಿ ‘ಕಾರ್ನೆಟ್ ಜಾರ್ಜ್ ಜಾಯ್ಸ್’ ಒಂದನೇ ಚಾರ್ಲ್ಸ್ ನ ಮೇಲೆ ಹಿಡಿತ ಸಾಧಿಸಿದನು. ಹೊಸ ಮಾದರಿ ಸೈನ್ಯವು ಪ್ರೆಸ್ಬಿಟೇರಿಯನ್ ಚರ್ಚ್ ವಸಾಹತು ವಿಷಯವಾಗಿ ಸಂಸತ್ ಸದಸ್ಯರ ಮೇಲೆ ಕೋಪಗೊಂಡಿತು. ಆ ಸಮಯದಲ್ಲಿ ಕ್ರೋಮ್ವೆಲ್ ಹೊಸ ಮಾದರಿ ಸೈನ್ಯವನ್ನು ಬೆಂಬಲಿಸಿದನು. ಪುಟ್ನಿಯಲ್ಲಿ ಕಾರ್ಯನಿರ್ವಾಹಕನ ಅಧಿಕಾರವನ್ನು ಪರಿಶೀಲಿಸುವ ಹಾಗೂ ನಿಯಮಿತವಾಗಿ ಚುನಾಯಿತ ಸಂಸತ್ತುಗಳನ್ನು ಸ್ಥಾಪಿಸುವ ಮತ್ತು ಕಡ್ಡಾಯವಲ್ಲದ ಎಪಿಸ್ಕೋಪಾಲಿಯನ್ ವಸಾಹತು ಪುನಃಸ್ಥಾಪಿಸುವ ಪ್ರಸ್ತಾಪವನ್ನು ಕ್ರೋಮ್ವೆಲ್ ಮುಂದಿಟ್ಟನು. ಆಗ ಸಂಸತ್ ಸದಸ್ಯರು ಹಾಗೂ ಲೆವೆಲರ್ಗಳು ಸಂಪೂರ್ಣ ರಾಜಕೀಯ ಸಮಾನತೆಯನ್ನು ಬಯಸಿದ್ದರು.
ಒಂದನೇ ಚಾರ್ಲ್ಸ್ ಹ್ಯಾಂಪ್ಟನ್ ಕೋರ್ಟ್ ನಿಂದ ತಪ್ಪಿಸಿಕೊಂಡು ಹಾಗೂ ಸ್ಕಾಟ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡು ಇಂಗ್ಲೆಂಡಿನ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದನು. ಪರಿಣಾಮವಾಗಿ 1648 ರಲ್ಲಿ ಎರಡನೇ ಅಂತರ್ಯುದ್ಧ ಪ್ರಾರಂಭವಾಯಿತು. ರಾಜನೊಂದಿಗೆ ಮಾತುಕತೆ ನಡೆಸಿದ ಸಂಸದರು ಆತನನ್ನು ಸಂಸತ್ತಿನಲ್ಲಿ ಕುಳಿತುಕೊಳ್ಳದಂತೆ ತಡೆದರು. ಸಂಸದರೆಲ್ಲರ ಒಪ್ಪಿಗೆಯ ಮೇರೆಗೆ ಚಾರ್ಲ್ಸ್ ನನ್ನು ದೇಶದ್ರೋಹಕ್ಕಾಗಿ ವಿಚಾರಣೆಗೆ ಒಳಪಡಿಸಿ ಗಲ್ಲಿಗೇರಿಸಲಾಯಿತು. ರಾಜನ ಡೆತ್ ವಾರಂಟ್ಗೆ ಕ್ರೋಮ್ವೆಲ್ ಸೇರಿದಂತೆ 56 ಸಂಸತ್ ಸದಸ್ಯರು ಸಹಿ ಹಾಕಿದರು. ನಂತರ ಸ್ಕಾಟ್ಸ್ ಮತ್ತು ಐರಿಶ್, ಚಾರ್ಲ್ಸ್ ನ ಮಗನನ್ನು ರಾಜನನ್ನಾಗಿ ಮಾಡಲು ಬಯಸಿದ್ದವು. 1649 ರಿಂದ 1651 ರವರೆಗೆ ಕ್ರೋಮ್ವೆಲ್ ಸ್ಕಾಟಿಷ್ ಮತ್ತು ಐರಿಶ್ ಪಡೆಗಳೊಂದಿಗೆ ರಕ್ತಸಿಕ್ತ ಯುದ್ಧವನ್ನು ನಡೆಸಿ ವಿಜಯಿಯಾದನು. ಇದರಿಂದ ಎರಡನೇ ಅಂತರ್ಯುದ್ಧವು ಕೊನೆಗೊಂಡಿತು.
ಇಂಗ್ಲೆಂಡಿನಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿ ಬೆಳೆದ ಆಲಿವರ್ ಕ್ರೋಮ್ವೆಲ್ (Oliver Cromwell) ಚರ್ಚ್ ನ ಹಿಡಿತದಿಂದ ರಂಪ್ ಪಾರ್ಲಿಮೆಂಟ್ ಅನ್ನು ಬದಲಾಯಿಸಿದನು. ಜನರಲ್ ಲ್ಯಾಂಬರ್ಟ್ ಸಂಸತ್ತನ್ನು ವಿಸರ್ಜಿಸಿದ ನಂತರ ಹೊಸ ಸಂವಿಧಾನವನ್ನು ಮಂಡಿಸಿದನು. 1653 ರಲ್ಲಿ ಕ್ರೋಮ್ವೆಲ್ ಲಾರ್ಡ್ ಪ್ರೊಟೆಕ್ಟರ್ ಆಗಿ ಕಾಗದದ ಸಂವಿಧಾನದಿಂದ ವ್ಯಾಖ್ಯಾನಿಸಲಾದ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥನಾದನು. ಮುಂದಿನ ವರ್ಷ ಸಂರಕ್ಷಿತ ಸಂಸತ್ತನ್ನು ವಿಸರ್ಜಿಸಲಾಯಿತು. ಆಡಳಿತ ನಡೆಸಲು ಮಾಡಿದ ಪ್ರಮುಖ ಜನರಲ್ಗಳ ನೇಮಕ ಜನಪ್ರಿಯವಾಗಲಿಲ್ಲ. ಇದರಿಂದ ಎರಡನೇ ಪ್ರೊಟೆಕ್ಟರೇಟ್ ಸಂಸತ್ತನ್ನು ರಚಿಸಲಾಯಿತು. 1657 ರಲ್ಲಿ ಅವನ ಬೆಂಬಲಿಗರು ಪರಿಷತ್ತಿನ ಅಧಿಕಾರವನ್ನು ಕಡಿಮೆ ಮಾಡುವ ಸಂವಿಧಾನವನ್ನು ಮಂಡಿಸಿ ಕ್ರೋಮ್ವೆಲ್ ರಾಜನಾಗಬೇಕೆಂದು ಶಿಫಾರಸ್ಸು ಮಾಡಿದರು. ಕ್ರೋಮ್ವೆಲ್ ಅದನ್ನು ನಿರಾಕರಿಸಿದನು. 1658 ರ ಸಂಸತ್ ಸಭೆಯಲ್ಲಿ ಅವನು ರಿಪಬ್ಲಿಕನ್ ಪಕ್ಷ ಮತ್ತು ಸೈನ್ಯದ ಇತರೆ ಸದಸ್ಯರ ವಿರೋಧವನ್ನು ಎದುರಿಸಬೇಕಾಯಿತು, ಕೂಡಲೇ ಸಂಸತ್ತನ್ನು ವಿಸರ್ಜಿಸಿದನು. ಇದೇ ಸಮಯಕ್ಕೆ ಕ್ರೋಮ್ವೆಲ್ನ ಆರೋಗ್ಯ ಕ್ಷೀಣಿಸಿ ಮರಣ ಹೊಂದಿದನು. ಬಹುಶಃ ಮಲೇರಿಯಾದಿಂದ ಸತ್ತನೆಂದು ಹೇಳಲಾಗುತ್ತದೆ. ಆತನ ದೇಹವನ್ನು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಸಮಾಧಿ ಮಾಡಲಾಯಿತು.
ಪ್ರಮುಖ ಘಟನೆಗಳು
1641 ರಲ್ಲಿ ಆಲಿವರ್ ಕ್ರೋಮ್ವೆಲ್ (Oliver Cromwell) ವಾರ್ಷಿಕ ಸಂಸತ್ತು ಮಸೂದೆಯ ಎರಡನೇ ವಾಚನವನ್ನು ಪರಿಚಯಿಸಿ ಎಪಿಸ್ಕೋಪಸಿ ನಿರ್ಮೂಲನೆಗಾಗಿ ರೂಟ್ ಮತ್ತು ಬ್ರಾಂಚ್ ಮಸೂದೆಯನ್ನು ರಚಿಸಿದನು. ಇದರಿಂದ ‘ಹೌಸ್ ಆಫ್ ಕಾಮನ್ಸ್’ ಅವನ ವಿರುದ್ಧ ಪ್ರತಿಭಟನಾ ಪ್ರಮಾಣವನ್ನು ರೂಪಿಸಿತು. ಕೂಡಲೇ ಸೌತ್ ವೇಲ್ಸ್ ನ ರಾಯಲ್ ದಂಗೆಯನ್ನು ಅಡಗಿಸಿದನು. 1648 ರಲ್ಲಿ ನಡೆದ ‘ಪ್ರೆಸ್ಟನ್ ಕದನ’ದಲ್ಲಿ ಅದ್ಭುತ ಜಯ ಗಳಿಸಿದುದರ ಜೊತೆಗೆ ಸ್ಕಾಟಿಷ್ ರಾಯಲಿಸ್ಟ್ ಸೈನ್ಯವನ್ನು ಕೆಳಗಿಳಿಸಿ ಎರಡನೇ ಅಂತರ್ಯುದ್ಧವನ್ನು ಕೊನೆಗೊಳಿಸಿದನು.
ವೈಯಕ್ತಿಕ ಜೀವನ
1670 ರಲ್ಲಿ ಆಲಿವರ್ ಕ್ರೋಮ್ವೆಲ್ (Oliver Cromwell) ಎಸೆಕ್ಸ್ ನ ಶ್ರೀಮಂತ ಚರ್ಮದ ವ್ಯಾಪಾರಿ ಸರ್ ಜೇಮ್ಸ್ ಬೌರ್ಚಿಯರ್ನ ಪುತ್ರಿ ‘ಎಲಿಜಬೆತ್ ಬೌರ್ಚಿಯರ್’ಳನ್ನು ವಿವಾಹವಾದನು. ಇವರು ಪ್ಯೂರಿಟನ್ ಕುಟುಂಬಗಳೊಂದಿಗೆ ಬಲವಾದ ಸಂಪರ್ಕ ಹೊಂದಿದ್ದರು. ದಂಪತಿಗಳಿಗೆ ಒಂಬತ್ತು ಮಕ್ಕಳಿದ್ದರು. ಕ್ರೋಮ್ವೆಲ್ ಸೆಪ್ಟೆಂಬರ್ 3, 1658 ರಂದು ವೈಟ್ಹಾಲ್ನಲ್ಲಿ ಮೂತ್ರದ ಸೋಂಕಿನಿಂದಾಗಿ ನಿಧನರಾದರೆಂದು ಕೆಲವು ಮೂಲಗಳು ಹೇಳುತ್ತವೆ. ಆತನ ಸಾವನ್ನು‘ಸೆಪ್ಟಿಸೆಮಿಯಾ’ಎಂದು ಹೆಸರಿಸಲಾಗಿದೆ. ಆತನ ದೇಹವನ್ನು ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ಸಮಾಧಿ ಮಾಡಲಾಯಿತು. 1661 ರಲ್ಲಿ ಈತನ ದೇಹವನ್ನು ಹೊರತೆಗೆದು ಟೈಬರ್ನ್ ನಲ್ಲಿ ಗಲ್ಲಿಗೇರಿಸಲಾಯಿತು. ಅವನ ಕತ್ತರಿಸಿದ ತಲೆಯನ್ನು ವೆಸ್ಟ್ ಮಿನಿಸ್ಟರ್ ಹಾಲ್ ಹೊರಗೆ ಪ್ರದರ್ಶಿಸಲಾಯಿತು. ಅಂತಿಮವಾಗಿ ಇದನ್ನು ಇಪ್ಪತ್ತನೇ ಶತಮಾನದಲ್ಲಿ ಕೇಂಬ್ರಿಡ್ಜ್ ನ ಸಿಡ್ನಿ ಸಸೆಕ್ಸ್ ಕಾಲೇಜಿನಲ್ಲಿ ಸಮಾಧಿ ಮಾಡಲಾಯಿತು.
# ಆಲಿವರ್ ಕ್ರೋಮ್ವೆಲ್
# Oliver Cromwell
# Kannada Butti
# ಕನ್ನಡ ಬುಟ್ಟಿ
