ವಿಲಿಯಂ ವ್ಯಾಲೇಸ್ (William Wallace) ಸ್ಕಾಟಿಷ್ ನೈಟ್ ಹಾಗೂ ಸ್ಕಾಟಿಷ್ ಸ್ವಾತಂತ್ರ‍್ಯ ಯುದ್ದದ ಕೇಂದ್ರ ಬಿಂದುವಾಗಿದ್ದನು. ಸ್ಕಾಟ್ಲೆಂಡ್‌ನ ಶ್ರೇಷ್ಠ ರಾಷ್ತ್ರೀಯ ವೀರರಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟ ವಿಲಿಯಂ ಇಂಗ್ಲಿಷ್ ಆಡಳಿತದ ವಿರುದ್ದ ತಮ್ಮ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸ್ಕಾಟ್‌ಲ್ಯಾಂಡ್‌ನ ಪಡೆಗಳನ್ನು ಮುನ್ನಡೆಸಿದವನು. ವಿಲಿಯಂ ವ್ಯಾಲೇಸ್ (William Wallace) ಸ್ಕಾಟ್ಲೆಂಡಿನ ರಾಜ ಮೂರನೇ ಅಲೆಕ್ಸಾಂಡರನ ಆಳ್ವಿಕೆಯ ಸಮಯದಲ್ಲಿ ಮನ್ನಣೆಗೆ ಬಂದನು. ಈ ಕಾಲಾವಧಿಯು ಶಾಂತಿ ಮತ್ತು ಆರ್ಥಿಕ ಸ್ಥಿರತೆಯಿಂದ ಗುರುತಿಸಲ್ಪಟ್ಟಿತ್ತು. ಮೂರನೇ ಅಲೆಕ್ಸಾಂಡರನ ಅಕಾಲಿಕ ಮರಣದ ನಂತರ ಸಿಂಹಾಸನದ ಅನುವಂಶಿಕತೆಯ ಬಗ್ಗೆ ಗೊಂದಲ ಉಂಟಾಯಿತು. ಆಗ ‘ಜಾನ್ ಬಲಿಯೋಲ್’ನನ್ನು ರಾಜ ಎಂದು ಹೆಸರಿಸುವ ಮೂಲಕ ಗೊಂದಲ ನಿವಾರಿಸಿದರು. ಆದಾಗ್ಯೂ ಇಂಗ್ಲೆಂಡ್ ನ ರಾಜ ಒಂದನೇ ಎಡ್ವರ್ಡ್ ‘ಜಾನ್ ಬಲಿಯೋಲ್’ನನ್ನು ಪದಚ್ಯುತಗೊಳಿಸಿ ಜೈಲಿಗೆ ತಳ್ಳಿ ತನ್ನನ್ನು ಸ್ಕಾಟ್‌ಲ್ಯಾಂಡ್‌ನ ಆಡಳಿತಗಾರನೆಂದು ಘೋಷಿಸಿಕೊಂಡನು. ನಾಗರಿಕರು ಇಂಗ್ಲಿಷ್ ರಾಜನ ಆಡಳಿತವನ್ನು ವಿರೋಧಿಸಲು ಪ್ರಾರಂಭಿಸಿದರು. ವಿಲಿಯಂ ವ್ಯಾಲೇಸ್ ನಾಗರಿಕರನ್ನು ಒಟ್ಟುಗೂಡಿಸಿ ಸ್ಕಾಟಿಷ್ ಪಟ್ಟಣವಾದ ಲಾನಾರ್ಕ್ನನ್ನು ಸುಟ್ಟು ಅದರ ಇಂಗ್ಲಿಷ್ ಶೆರಿಫ್‌ನನ್ನು ಕೊಂದನು. ಸ್ಕಾಟಿಷ್ ಸ್ವಾತಂತ್ರ‍್ಯ ಯುದ್ಧಗಳ ಸಮಯದಲ್ಲಿ ವ್ಯಾಲೇಸ್ ದೊಡ್ಡ ಸೈನ್ಯವನ್ನು ಸಂಘಟಿಸಿ ಇಂಗ್ಲಿಷ್ ಪಡೆಗಳ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿ ಪ್ರಮುಖ ನಾಯಕರಲ್ಲಿ ಒಬ್ಬನಾಗಿ ಹೊರಹೊಮ್ಮಿದನು. ಸೆಪ್ಟೆಂಬರ್ 1297 ರಲ್ಲಿ ಆಂಡ್ರ‍್ಯೂ ಮೊರೆಯೊಂದಿಗೆ ನಡೆದ ‘ಸ್ಟಿರ್ಲಿಂಗ್ ಸೇತುವೆಯ ಕದನ’ದಲ್ಲಿ ವ್ಯಾಲೇಸ್ ಇಂಗ್ಲಿಷ್ ಸೈನ್ಯವನ್ನು ಸೋಲಿಸಿದನು. ಈ ಯುದ್ಧದಲ್ಲಿ ಇಂಗ್ಲೀಷರ ಸೈನ್ಯ ವ್ಯಾಲೇಸ್‌ನ ಸೈನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿತ್ತು. ಆದರೂ ವ್ಯಾಲೇಸ್ ಅದ್ಭುತ ವಿಜಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿ ಸ್ಕಾಟ್ಲೆಂಡಿನ ಗಾರ್ಡಿಯನ್ ಆಗಿ ನೇಮಕಗೊಂಡನು. ನಂತರ ವ್ಯಾಲೇಸ್‌ನನ್ನು ದೇಶದ್ರೋಹದ ಆರೋಪದ ಮೇಲೆ ಸೆರೆಹಿಡಿದು ಕ್ರೂರವಾಗಿ ಮರಣದಂಡನೆಗೊಳಪಡಿಸಲಾಯಿತು. ಜೀವಿತದ ಕೊನೆಯವರೆಗೂ ಇಂಗ್ಲಿಷರ ವಿರುದ್ಧ ಶೌರ್ಯದಿಂದ ಹೋರಾಡಿದನು.
ಬಾಲ್ಯ ಮತ್ತು ಆರಂಭಿಕ ಜೀವನ
ವಿಲಿಯಂ ವ್ಯಾಲೇಸ್ (William Wallace) ಸ್ಕಾಟ್ಲೆಂಡ್‌ನ ರೆನ್‌ಫ್ರೂಶೈರ್‌ನ ‘ಎಲ್ಡರ್ಸ್ಲಿ’ಯಲ್ಲಿ ಸುಮಾರು 1270 ರಲ್ಲಿ ಜನಿಸಿದನು. ಅವನ ಪೋಷಕರು ಹಾಗೂ ಹುಟ್ಟಿದ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕೆಲವು ಮೂಲಗಳ ಪ್ರಕಾರ ಅವನ ತಂದೆ ಸರ್ ಮಾಲ್ಕಮ್. ಆದರೆ ವಿಲಿಯಂನ ಸ್ವಂತ ಮುದ್ರೆ ಅವನ ತಂದೆಯ ಹೆಸರನ್ನು ‘ಅಲನ್ ವ್ಯಾಲೇಸ್’ ಎಂದು ಹೇಳುತ್ತದೆ. ಆದಾಗ್ಯೂ ಅವನಿಗೆ ಮಾಲ್ಕಮ್ ಮತ್ತು ಜಾನ್ ಎಂಬ ಇಬ್ಬರು ಸಹೋದರರಿದ್ದರೆಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ವ್ಯಾಲೇಸ್‌ನ ಕುಟುಂಬದ ಸದಸ್ಯರು ರಿಕಾರ್ಟನ್, ಟಾರ್ಬೋಲ್ಟನ್, ಕೈಲ್‌ನ ಆಚಿನ್‌ಕ್ರೂವ್ ಮತ್ತು ಪೂರ್ವ ಲೋಥಿಯನ್‌ನ ಸ್ಟೆಂಟನ್‌ನಲ್ಲಿ ಎಸ್ಟೇಟ್‌ಗಳನ್ನು ಹೊಂದಿದ್ದರು. ಅಲ್ಲದೆ ಸ್ಕಾಟ್‌ಲೆಂಡ್‌ನ ಐದನೇ ಹೈ ಸ್ಟೀವರ್ಡ್ ಜೇಮ್ಸ್ ಸ್ಟೀವರ್ಟ್ ನ ವಸಾಹತುಗಾರರಾಗಿದ್ದರು ಎಂಬ ದಾಖಲೆಗಳಿವೆ.
ಸ್ಕಾಟ್ಲೆಂಡಿನ ರಾಜ ಮೂರನೇ ಅಲೆಕ್ಸಾಂಡರ್‌ನ ಆಳ್ವಿಕೆಯಲ್ಲಿ ವಿಲಿಯಂ ವ್ಯಾಲೇಸ್ ಬೆಳಕಿಗೆ ಬಂದನು. ಇದು ಶಾಂತಿ ಮತ್ತು ಆರ್ಥಿಕ ಸ್ಥಿರತೆಯ ಅವಧಿಯಾಗಿತ್ತು. ಆದಾಗ್ಯೂ ರಾಜ ಮೂರನೇ ಅಲೆಕ್ಸಾಂಡರ್ 19 ನೇ ಮಾರ್ಚ್ 1286 ರಂದು ಕುದುರೆ ಸವಾರಿ ಅಪಘಾತದಲ್ಲಿ ನಿಧನರಾದರು. ಸಿಂಹಾಸನದ ಉತ್ತರಾಧಿಕಾರಿ ಅಲೆಕ್ಸಾಂಡರ್‌ನ ಮೊಮ್ಮಗಳು ನಾರ್ವೆಯ ಸೇವಕಿ ಮಾರ್ಗರೇಟ್ ಇನ್ನೂ ಚಿಕ್ಕ ಮಗುವಾಗಿದ್ದಳು. ಆದ್ದರಿಂದ ಸ್ಕಾಟಿಷ್ ಪ್ರಭುಗಳು ಆಕೆ ವಯಸ್ಸಿಗೆ ಬರುವವರೆಗೂ ಅವಳ ಪರವಾಗಿ ಆಳ್ವಿಕೆ ನಡೆಸಲು ರಕ್ಷಕರ ಸರ್ಕಾರವನ್ನು ಸ್ಥಾಪಿಸಿದರು. ನಾಲ್ಕು ವರ್ಷಗಳ ನಂತರ ಮಾರ್ಗರೆಟ್ ಸ್ಕಾಟ್ಲೆಂಡ್‌ಗೆ ಪ್ರಯಾಣ ಮಾಡುವಾಗ ಅನಾರೋಗ್ಯದಿಂದಾಗಿ 26 ನೇ ಸೆಪ್ಟೆಂಬರ್ 1290 ರಂದು ಓರ್ಕ್ನಿಯಲ್ಲಿ ನಿಧನಳಾದಳು. ಇದರಿಂದಾಗಿ ಸ್ಕಾಟ್‌ಲ್ಯಾಂಡ್‌ನ ಸಿಂಹಾಸನಕ್ಕೆ ನೇರ ಉತ್ತರಾಧಿಕಾರಿ ಇಲ್ಲದಂತಾಗಿ ಹಲವಾರು ಕುಟುಂಬಗಳು ಸಿಂಹಾಸನಕ್ಕೆ ಹಕ್ಕು ಸಾಧಿಸತೊಡಗಿದವು.
ಈ ಅವ್ಯವಸ್ಥೆ ಸ್ಕಾಟ್ಲೆಂಡ್‌ನ ಅಂತರ್ಯುದ್ಧಕ್ಕೆ ನಾಂದಿಯಾಗುತ್ತದೆಂದು ಭಯ ಮೂಡಿಸಿತು. ಸ್ಕಾಟಿಷ್ ಶ್ರೀಮಂತರು ಇಂಗ್ಲೆಂಡ್ ರಾಜ ಒಂದನೇ ಎಡ್ವರ್ಡ್ ಅನ್ನು ಮಧ್ಯಸ್ಥಿಕೆ ವಹಿಸಲು ಆಹ್ವಾನಿಸಿದರು. ಎಡ್ವರ್ಡ್ ಮೊದಲು ತನ್ನನ್ನು ಸ್ಕಾಟ್ಲೆಂಡ್‌ನ ಲಾರ್ಡ್ ಪ್ಯಾರಾಮೌಂಟ್ ಎಂದು ಘೋಷಿಸಿಕೊಂಡು ಎಲ್ಲಾ ಸ್ಪರ್ಧಿಗಳು ಅವನನ್ನು ಗುರುತಿಸಬೇಕೆಂದು ಒತ್ತಾಯಿಸಿದನು. ಅಂತಿಮವಾಗಿ 1292 ರ ನವೆಂಬರ್‌ನಲ್ಲಿ ಬರ್ವಿಕ್-ಆನ್-ಟ್ವೀಡ್‌ನಲ್ಲಿದ್ದ ಕೋಟೆಯಲ್ಲಿ ಊಳಿಗಮಾನ್ಯ ನ್ಯಾಯಾಲಯವೊಂದನ್ನು ಸ್ಥಾಪಿಸಿ ಅದರಲ್ಲಿ ವಿಚಾರಣೆ ನಡೆಸಿ ‘ಜಾನ್ ಬಲಿಯೋಲ್’ ಸಿಂಹಾಸನಕ್ಕೆ ಕಾನೂನಿನ ಪ್ರಬಲ ಹಕ್ಕನ್ನು ಹೊಂದಿದ್ದಾನೆಂದು ತೀರ್ಮಾನಿಸಿ ಅವನನ್ನು ರಾಜನನ್ನಾಗಿ ಮಾಡಲಾಯಿತು.
ಆದಾಗ್ಯೂ ಜಾನ್ ದುರ್ಬಲ ರಾಜನಾಗಿದ್ದರಿಂದ ‘ಟೂಮ್ ಟ್ಯಾಬಾರ್ಡ್’ ಅಥವಾ ‘ಖಾಲಿ ಕೋಟ್’ ಎಂಬ ಅವಮಾನಕರ ಹೆಸರುಗಳನ್ನು ಗಳಿಸಿದನು. ಅವಕಾಶವನ್ನು ಬಳಸಿಕೊಂಡ ಒಂದನೇ ಕಿಂಗ್ ಎಡ್ವರ್ಡ್ 1296 ರಲ್ಲಿ ಬರ್ವಿಕ್-ಆನ್-ಟ್ವೀಡ್ ಮೇಲೆ ದಂಡೆಯಾತ್ರೆ ಕೈಗೊಂಡು ಪೂರ್ವ ಲೋಥಿಯನ್‌ನಲ್ಲಿ ನಡೆದ ಡನ್‌ಬಾರ್ ಕದನದಲ್ಲಿ ಸ್ಕಾಟ್‌ಗಳನ್ನು ಸೋಲಿಸಲು ಮುಂದಾದನು. ಜೊತೆಗೆ ಸಿಂಹಾಸನವನ್ನು ತ್ಯಜಿಸುವಂತೆ ಜಾನ್‌ಗೆ ಒತ್ತಾಯಿಸಿ ಸ್ಕಾಟ್‌ಲ್ಯಾಂಡ್‌ನ ನಿಯಂತ್ರಣವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ತಾನು ಸ್ಕಾಟ್‌ಲ್ಯಾಂಡ್‌ನ ಆಡಳಿತಗಾರನೆಂದು ಘೋಷಿಸಿಕೊಂಡನು.
ಮಿಲಿಟರಿ ಕಾರ್ಯಾಚರಣೆಗಳು
ಸ್ಕಾಟಿಷ್ ನಾಗರಿಕರಲ್ಲಿ ಅನೇಕರು ಈ ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಜನರು ಇಂಗ್ಲಿಷ್ ಆಡಳಿತದ ವಿರುದ್ಧ ಆಗಾಗ್ಗೆ ಪ್ರತಿಭಟಿಸಿದರು. ಮೇ 1297 ರಲ್ಲಿ ವಿಲಿಯಂ ವ್ಯಾಲೇಸ್ ಸುಮಾರು 30 ಪುರುಷರ ಗುಂಪನ್ನು ಒಟ್ಟುಗೂಡಿಸಿ ಸ್ಕಾಟಿಷ್ ಪಟ್ಟಣವಾದ ಲಾನಾರ್ಕ್ ಅನ್ನು ಸುಟ್ಟುಹಾಕಿದನು. ಲಾನಾರ್ಕ್ ನ ಇಂಗ್ಲಿಷ್ ಹೈ ಶೆರಿಫ್ ‘ವಿಲಿಯಂ ಡಿ ಹೆಸೆಲ್ರಿಗ್’ನನ್ನು ಕೊಂದನು. ನಂತರ ಲಾರ್ಡ್ ಆಫ್ ಡೌಗ್ಲಾಸ್‌ನ ‘ವಿಲಿಯಂ ದಿ ಹಾರ್ಡಿ’ಯೊಂದಿಗೆ ಸೇರಿ ಸ್ಕೋನ್ ಮೇಲೆ ದಾಳಿ ನಡೆಸಿದನು. ಅದೇ ಸಮಯದಲ್ಲಿ ಸ್ಕಾಟ್ಲೆಂಡಿನ ಉತ್ತರದಲ್ಲಿ ಆಂಡ್ರ‍್ಯೂ ಮೋರೆ ನೇತೃತ್ವದಲ್ಲಿ ಹಲವಾರು ದಂಗೆಗಳು ನಡೆಯುತ್ತಿದ್ದವು.
ಆರಂಭದಲ್ಲಿ ಪ್ರತ್ಯೇಕ ದಂಗೆಗಳನ್ನು ಮುನ್ನಡೆಸುತ್ತಿದ್ದ ವ್ಯಾಲೇಸ್ ಮತ್ತು ಮೋರೆ ಇಬ್ಬರು ಒಟ್ಟಾಗಿ 1297 ರ ಸೆಪ್ಟೆಂಬರ್‌ನಲ್ಲಿ ಸೈನ್ಯವನ್ನು ಮುನ್ನಡೆಸಿ ಸ್ಟಿರ್ಲಿಂಗ್ ಬಳಿಯ ಫೋರ್ತ್ ನಲ್ಲಿ ಸರ‍್ರೆಯ 6ನೇ ಅರ್ಲ್ ಜಾನ್ ಡಿ ವಾರೆನ್ ಮತ್ತು ಹಗ್ ಡಿ ಕ್ರೇಸಿಂಗ್ರಾಮ್ ನೇತೃತ್ವದ ಇಂಗ್ಲಿಷ್ ಸೈನ್ಯವನ್ನು ಎದುರಿಸಿದರು. 3,000 ಅಶ್ವ ಸೈನ್ಯ ಮತ್ತು 8,000 ರಿಂದ 10,000 ಕಾಲಾಳು ಪಡೆಗಳನ್ನು ಹೊಂದಿದ್ದ ಇಂಗ್ಲಿಷ್ ಸೈನ್ಯವು ಸ್ಕಾಟಿಷ್ ಪಡೆಗಿಂತ ಹೆಚ್ಚಾಗಿತ್ತು. ಚತುರ ಸ್ಕಾಟಿಷ್ ನಾಯಕರು ಇಂಗ್ಲಿಷರನ್ನು ಸೋಲಿಸುವ ಯೋಜನೆಯನ್ನು ಜಾರಿಗೆ ತಂದರು. ಸ್ಕಾಟಿಷ್ ಪಡೆಗಳನ್ನು ತಲುಪಲುಇಂಗ್ಲಿಷರು ಮೊದಲು ಕಿರಿದಾದ ಸೇತುವೆಯನ್ನು ಬಳಸಿಕೊಂಡು ಫೋರ್ತ್ ನದಿಯ ಉತ್ತರ ಭಾಗಕ್ಕೆ ದಾಟಬೇಕಾಗಿತ್ತು.
ಸೇತುವೆ ಎಷ್ಟು ಕಿರಿದಾಗಿತ್ತೆಂದರೆ ಏಕಕಾಲದಲ್ಲಿ ಕೆಲವೇ ಪುರುಷರು ಅದನ್ನು ದಾಟಲು ಸಾಧ್ಯವಿತ್ತು. ಈ ವಿವರವನ್ನು ಗಮನದಲ್ಲಿಟ್ಟುಕೊಂಡು ವ್ಯಾಲೇಸ್ ಮತ್ತು ಮೋರೆ ಸ್ಕಾಟಿಷ್ ಪಡೆಗಳನ್ನು ಆಯಕಟ್ಟಿನ ರೀತಿಯಲ್ಲಿ ನಿಯೋಜಿಸಿ ಸೇತುವೆಯ ಮೇಲೆ ದಾಟುವುದು ಸುರಕ್ಷಿತ ಎಂಬ ತಪ್ಪು ಅಭಿಪ್ರಾಯವನ್ನು ಇಂಗ್ಲಿಷರಿಗೆ ನೀಡಿ ಅರ್ಧದಷ್ಟು ಇಂಗ್ಲಿಷ್ ಸೈನಿಕರು ಮಾತ್ರ ಸೇತುವೆ ದಾಟಲು ಅವಕಾಶ ಮಾಡಿಕೊಟ್ಟರು. ಇಂಗ್ಲೀಷರು ಇವರ ಬಲೆಗೆ ಬಿದ್ದು ಹೊರಳಾಡಿದರು. ಅವರ ಅರ್ಧದಷ್ಟು ಸೈನಿಕರು ಸೇತುವೆ ದಾಟಲು ಪ್ರಾರಂಭಿಸಿದ ಕೂಡಲೇ ಸ್ಕಾಟ್ಸ್ ಅವರ ಮೇಲೆ ವೇಗವಾಗಿ ದಾಳಿ ನಡೆಸಿ ಸೇತುವೆ ದಾಟಿದ ಸೈನಿಕರನ್ನು ಕೊಂದರು. ಇದರಿಂದ ಕೆಲವು ಇಂಗ್ಲಿಷ್ ಸೈನಿಕರು ಹಿಮ್ಮೆಟ್ಟಿದರು. ಇತರೆ ಸೈನಿಕರು ಸೇತುವೆಯ ಮೇಲೆ ಮುಂದಕ್ಕೆ ತಳ್ಳಲ್ಪಟ್ಟರು. ಇಂಗ್ಲಿಷ್ ಸೈನಿಕರ ಅತಿಯಾದ ತೂಕದಿಂದ ಸೇತುವೆ ಮುರಿದು ಹಲವಾರು ಸೈನಿಕರು ನದಿಯಲ್ಲಿ ಮುಳುಗಿದರು. ಹೀಗಾಗಿ ವ್ಯಾಲೇಸ್ ಮತ್ತು ಮೋರೆ ಅದ್ಭುತ ಜಯ ಸಾಧಿಸಲು ಸಾಧ್ಯವಾಯಿತು.
ಇಂಗ್ಲಿಷ್ ವಿರುದ್ಧದ ಈ ಗೆಲುವು ಸ್ಕಾಟ್ಲೆಂಡಿನ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾದ ನಾಗರಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಇಂಗ್ಲಿಷ್ ಪಡೆಗಳ ಅವಮಾನಕರ ಈ ಸೋಲು ಸ್ಕಾಟ್ಲೆಂಡ್‌ಗೆ ಸ್ವಲ್ಪ ಸಮಯದವರೆಗೆ ಇಂಗ್ಲಿಷ್ ಸೈನ್ಯದ ಭಯದಿಂದ ಮುಕ್ತಿ ನೀಡಿತು. ಯುದ್ಧದ ನಂತರ ಮೋರೆ ಮತ್ತು ವ್ಯಾಲೇಸ್ ಇಬ್ಬರಿಗೂ ಕಿಂಗ್ ‘ಜಾನ್ ಬಲಿಯೋಲ್’ ಸ್ಕಾಟ್ಲೆಂಡ್ ಸಾಮ್ರಾಜ್ಯದ ಗಾರ್ಡಿಯನ್ ಎಂಬ ಬಿರುದನ್ನು ನೀಡಿದನು. ಧೈರ್ಯಶಾಲಿ ಮೊರೆ 1297 ರ ಕೊನೆಯಲ್ಲಿ ಯುದ್ಧಭೂಮಿಯಲ್ಲಿ ಅನುಭವಿಸಿದ ಗಾಯಗಳಿಂದ ಮರಣ ಹೊಂದಿದನು. ನವೆಂಬರ್ 1297 ರ ಸುಮಾರಿಗೆ ವ್ಯಾಲೇಸ್ ಉತ್ತರ ಇಂಗ್ಲೆಂಡ್ ಮೇಲೆ ಆಕ್ರಮಣ ಮಾಡಿ ನಾರ್ತ್ ಬರ್ಲ್ಯಾಂಡ್ ಮತ್ತು ಕಂಬರ್ಲ್ಯಾಂಡ್ ಕೌಂಟಿಗಳನ್ನು ಧ್ವಂಸ ಮಾಡಿದನು. ವ್ಯಾಲೇಸ್ ಇಂಗ್ಲಿಷರ ಬಗ್ಗೆ ಕ್ರೂರತೆಗೆ ಹೆಸರುವಾಸಿಯಾಗಿದ್ದನು. ಸತ್ತ ಇಂಗ್ಲಿಷ್ ಸೈನಿಕರ ಚರ್ಮವನ್ನು ಟ್ರೋಫಿಯನ್ನಾಗಿಸಿಟ್ಟಿದ್ದ ಎಂದು ವರದಿಯಾಗಿದೆ. ಆ ವರ್ಷದ ಕೊನೆಯಲ್ಲಿ ನಡೆದ ಸಮಾರಂಭದಲ್ಲಿ ‘ಕಿರ್ಕ್ ಒ ಫಾರೆಸ್ಟ್’ ಎಂದು ಬಿರುದಾಂಕಿತನಾದನು.
ಇಂಗ್ಲಿಷರ ವಿರುದ್ಧ ವಿಲಿಯಂ ವ್ಯಾಲೇಸ್ (William Wallace) ಸಾಧಿಸಿದ ವಿಜಯಗಳು ಅವನ ನೈತಿಕ ಸಾಮರ್ಥ್ಯವನ್ನು ಬಹಿರಂಗಪಡಿಸಿದವು. ವ್ಯಾಲೇಸ್ ಬಳಸಿದ ಅವಕಾಶವಾದಿ ತಂತ್ರಗಳು ಅಶ್ವದಳ ಯುದ್ಧದ ಸಮಕಾಲೀನ ದೃಷ್ಟಿಕೋನಗಳಿಂದ ಬಹಳಷ್ಟು ವಿಶೇಷವಾಗಿದ್ದವು. ಅಲ್ಲದೇ ಅವನ ಶಸ್ತ್ರಾಸ್ತ್ರಗಳ ಬಲ ನೈಟ್ಲಿ ಯುದ್ಧದಿಂದ ನಿರೂಪಿಸಲಟ್ಟಿತು. ಈ ಸೋಲಿನ ನಂತರ ವ್ಯಾಲೇಸ್‌ನ ಬಗ್ಗೆ ಇಂಗ್ಲಿಷರ ತಿರಸ್ಕಾರವು ಅನೇಕ ಪಟ್ಟು ಹೆಚ್ಚಾಗತೊಡಗಿತು.ಸ್ಕಾಟ್ಸ್ ನ ಕೈಯಲ್ಲಿ ನಾಚಿಕೆಗೇಡಿನ ಸೋಲನ್ನು ಕಂಡ ಎಡ್ವರ್ಡ್ ಅಷ್ಟು ಸುಲಭವಾಗಿ ಬಿಟ್ಟುಕೊಡುವ ವ್ಯಕ್ತಿಯಾಗಿರಲಿಲ್ಲ. ಏಪ್ರಿಲ್ 1298 ರಲ್ಲಿ ಸ್ಕಾಟ್‌ಲ್ಯಾಂಡ್‌ನ ಮೇಲೆ ಎರಡನೇ ಆಕ್ರಮಣಕ್ಕೆ ಆದೇಶಿಸಿದನು. ಆಗ ಅವರ ಸೈನ್ಯವು ಸುಮಾರು 25,000 ಕ್ಕೂ ಹೆಚ್ಚು ಕಾಲ್ದಳದ ಸೈನಿಕರು ಮತ್ತು ಸುಮಾರು 1500 ಕುದುರೆ ಸವಾರರನ್ನೊಳಗೊಂಡಿತ್ತು.
ಇಂಗ್ಲಿಷ್ ಸೈನ್ಯಗಳು ಲೋಥಿಯನ್‌ಗೆ ನುಗ್ಗಿ ಆ ಪ್ರದೇಶವನ್ನು ಲೂಟಿ ಮಾಡಿ ಕೆಲವು ಕೋಟೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಇವೆಲ್ಲದರ ನಡುವೆ ವ್ಯಾಲೇಸ್ ಯುದ್ಧಕ್ಕೆ ಪ್ರವೇಶಿಸಲು ವಿಫಲನಾದನು. ಸ್ಕಾಟ್ಸ್ ಮೊದಲಿಗೆ ಇಂಗ್ಲಿಷ್ ಸೈನ್ಯವನ್ನು ನರಳಾಡಿಸಲು ಪ್ರಯತ್ನಿಸಿದರು. ಯುದ್ದ ಸಾಮಾಗ್ರಿಗಳ ಸರಬರಾಜು ಮತ್ತು ಹಣದ ಕೊರತೆಯಿಂದಾಗಿ ಇಂಗ್ಲಿಷರು ತಮ್ಮ ಪಡೆಗಳನ್ನು ಹಿಂತೆಗೆದುಕೊಳ್ಳುವವರೆಗೂ ಯುದ್ಧವನ್ನು ತಪ್ಪಿಸುವ ಉದ್ದೇಶ ಹೊಂದಿದ್ದರು. ತಮ್ಮ ಸಂಪನ್ಮೂಲಗಳೆಲ್ಲ ಖಾಲಿಯಾಗಿ ಯುದ್ಧದಿಂದ ದಣಿದ ಇಂಗ್ಲಿಷ್ ಪಡೆಗಳ ಮೇಲೆ ದಾಳಿ ಮಾಡಲು ವ್ಯಾಲೇಸ್ ಯೋಜಿಸಿದನು.
ಏತನ್ಮಧ್ಯೆ ಇಂಗ್ಲಿಷರ ಸರಕು ಸಾಮಗ್ರಿಗಳನ್ನೊತ್ತ ಸರಬರಾಜು ನೌಕೆಯ ವಿಳಂಬದಿಂದಾಗಿ ಅವರ ಪಡೆಗಳು ಮಧ್ಯ ಸ್ಕಾಟ್ಲೆಂಡ್ ತಲುಪುವ ಹೊತ್ತಿಗೆ ದಣಿದು ನಿರಾಶೆಗೊಂಡು ನೈತಿಕವಾಗಿ ಕುಗ್ಗಿದವು. ಇದರಿಂದ ಇಂಗ್ಲಿಷ್ ಸೈನ್ಯದೊಳಗೆ ಗಲಭೆಗಳು ಭುಗಿಲೆದ್ದು ಎಡ್ವರ್ಡ್ ನ ವಿರುದ್ಧ ತಿರುಗಿ ಬೀಳಲಾರಂಭಿಸಿದವು. ಈ ಸಮಯದಲ್ಲಿ ವ್ಯಾಲೇಸ್ ಎಡ್ವರ್ಡ್ ನ ಸೈನ್ಯದ ಮೇಲೆ ದಾಳಿ ನಡೆಸಲು ಫಾಲ್ಕಿರ್ಕ್ ಬಳಿ ಬೀಡು ಬಿಟ್ಟಿದ್ದಾನೆ ಎಂಬ ಅಂಶ ಎಡ್ವರ್ಡನಿಗೆ ತಿಳಿಯಿತು.ಇಂಗ್ಲಿಷರು ಸ್ಕೀಟಿಂಗ್ ಸ್ಕಾಟ್ಸ್ ಮೇಲೆ ದಾಳಿ ಮಾಡಿದಾಗ ಸ್ಕಾಟಿಷ್ ಬಿಲ್ಲುಗಾರರನ್ನುಹೋರಾಟಕ್ಕೆ ಇಳಿಸಿದರು. ಈ ಸಮಯದಲ್ಲಿ ಇಂಗ್ಲಿಷರು ಆಯಕಟ್ಟಿನ ಉನ್ನತ ಸ್ಥಾನದಲ್ಲಿದ್ದರು ಮತ್ತು ಸ್ಕಾಟಿಷ್ ಅಶ್ವ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಎಡ್ವರ್ಡ್ ಸೈನಿಕರು ಯುದ್ಧದಲ್ಲಿ ಆಕ್ರಮಣಕಾರಿಯಾಗಿ ಹೋರಾಡಿ ಸ್ಕಾಟಿಷ್ ಪ್ರತಿರೋಧವನ್ನು ಹತ್ತಿಕ್ಕಿ ಅವರ ಹಲವಾರು ಪ್ರಮುಖ ಯೋಧರನ್ನು ಕೊಂದರು. ವ್ಯಾಲೇಸ್ ಜೀವಂತವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನಾದರೂ ಇದರಿಂದ ಅವನ ಮಿಲಿಟರಿ ಖ್ಯಾತಿ ಶಾಶ್ವತವಾಗಿ ಹಾಳಾಯಿತು. ಈ ಕುಖ್ಯಾತ ಸೋಲಿನ ನಂತರ ವ್ಯಾಲೇಸ್ ಸ್ಕಾಟ್ಲೆಂಡ್‌ನ ಗಾರ್ಡಿಯನ್ ಹುದ್ದೆಗೆ ರಾಜೀನಾಮೆ ನೀಡಿದನು.
ಮುಂದಿನ ಕೆಲವು ವರ್ಷಗಳಲ್ಲಿ ವಿಲಿಯಂ ವ್ಯಾಲೇಸ್ (William Wallace) ಇರುವ ಸ್ಥಳದ ವಿವರಗಳು ಅಸ್ಪಷ್ಟವಾಗಿವೆ. ಸ್ಕಾಟ್ಲೆಂಡಿನ ದಂಗೆಗೆ ಫ್ರೆಂಚ್ ಬೆಂಬಲವನ್ನು ಕಳುಹಿಸುವಂತೆ ರಾಜ ನಾಲ್ಕನೇ ಫಿಲಿಪ್‌ರನ್ನು ಕೋರಲು ವಿಲಿಯಂ ವ್ಯಾಲೇಸ್ ಪ್ರಾನ್ಸಿಗೆ ಹೋದನೆಂದು ಕೆಲವು ಮೂಲಗಳು ಸೂಚಿಸುತ್ತವೆ. ಇನ್ನೊಂದು ಮೂಲದ ಪ್ರಕಾರ ಅವನು ರೋಮ್‌ಗೆ ಪ್ರಯಾಣಿಸುವ ಉದ್ದೇಶವನ್ನು ಹೊಂದಿದ್ದನೆಂದು ಹೇಳಲಾಗುತ್ತದೆ. 1304 ರ ಹೊತ್ತಿಗೆ ಸ್ಕಾಟಿಷ್ ನಾಯಕರಲ್ಲಿ ಹೆಚ್ಚಿನವರು ಎಡ್ವರ್ಡ್ ನನ್ನು ತಮ್ಮ ರಾಜನನ್ನಾಗಿ ಸ್ವೀಕರಿಸಿದ್ದರು. ಈ ಮಧ್ಯೆ ಎಡ್ವರ್ಡ್ ಪಟ್ಟು ಬಿಡದೆ ವ್ಯಾಲೇಸ್‌ನ ಬಂದನಕ್ಕೆ ಮುಂದಾದನು. 1304 ರ ಹೊತ್ತಿಗೆ ವ್ಯಾಲೇಸ್ ಸ್ಕಾಟ್ಲೆಂಡ್‌ಗೆ ಮರಳಿ ಸ್ವಲ್ಪ ಸಮಯದವರೆಗೆ ಬಂಧನವನ್ನು ಯಶಸ್ವಿಯಾಗಿ ತಪ್ಪಿಸಿಕೊಂಡನು. ಅಂತಿಮವಾಗಿ ವ್ಯಾಲೇಸ್‌ನನ್ನು ಆಗಸ್ಟ್ 5, 1305 ರಂದು ಬಂಧಿಸಿ ವೆಸ್ಟ್ ಮಿನಿಸ್ಟರ್ ಹಾಲ್‌ಗೆ ಕರೆದೊಯ್ಯಲಾಯಿತು. ನಂತರ ದೇಶದ್ರೋಹ ಮತ್ತು ಯುದ್ಧದಲ್ಲಿ ನಾಗರಿಕರ ಮೇಲಿನ ದೌರ್ಜನ್ಯಕ್ಕಾಗಿ ವಿಚಾರಣೆಗೆ ಒಳಪಡಿಸಲಾಯಿತು.
ಪ್ರಮುಖ ಯುದ್ಧಗಳು
ವಿಲಿಯಂ ವ್ಯಾಲೇಸ್‌ನು ಆಂಡ್ರ‍್ಯೂ ಮೋರೆಯೊಂದಿಗೆ 1297 ರಲ್ಲಿ ನಡೆದ ‘ಸ್ಟಿರ್ಲಿಂಗ್ ಸೇತುವೆಯ ಕದನ’ದಲ್ಲಿ ಸ್ಕಾಟಿಷ್ ಪಡೆಗಳನ್ನು ಮುನ್ನಡೆಸಿದ್ದನು. ಇವನ ಕಾರಣದಿಂದಾಗಿ ಸರ‍್ರೆಯ 6 ನೇ ಅರ್ಲ್ ಜಾನ್ ಡಿ ವಾರೆನ್ ಮತ್ತು ಹಗ್ ಡಿ ಕ್ರೆಸಿಂಗ್ರಾಮ್‌ರ ಸಂಯೋಜಿತ ಇಂಗ್ಲಿಷ್ ಪಡೆಗಳ ವಿರುದ್ಧಸ್ಕಾಟ್ಸ್ ವಿಜಯ ಸಾಧಿಸಲು ಸಾಧ್ಯವಾಯಿತು. ಈ ಗೆಲುವು ಸ್ಕಾಟ್ಲೆಂಡಿನ ಇಂಗ್ಲಿಷ್ ಆಡಳಿತದ ವಿರುದ್ಧದ ಸ್ವಾತಂತ್ರ‍್ಯ ಹೋರಾಟದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಸಾಬೀತಾಯಿತು. ಫಾಲ್ಕಿರ್ಕ್ ಕದನವು ವ್ಯಾಲೇಸ್ ಹೋರಾಡಿದ ಮತ್ತೊಂದು ಪ್ರಮುಖ ಯುದ್ಧವಾಗಿತ್ತು. ಎಡ್ವರ್ಡ್ ನೇತೃತ್ವದ ಇಂಗ್ಲಿಷ್ ಸೈನ್ಯವು ಸ್ಕಾಟ್‌ಲ್ಯಾಂಡ್‌ಗೆ ನುಗ್ಗಿದಾಗ ಅವರ ಸಂಪನ್ಮೂಲಗಳು ಖಾಲಿಯಾಗುವವರೆಗೂ ಇಂಗ್ಲಿಷರ ಸೈನ್ಯವನ್ನು ನರಳಾಡಿಸಲು ವ್ಯಾಲೇಸ್ ಯೋಜಿಸಿ ನಂತರ ಅವನ ದಾಳಿಯನ್ನು ಪ್ರಾರಂಭಿಸಿದನು. ಆದಾಗ್ಯೂ ಅವನ ಯೋಜನೆಯು ಹಿಮ್ಮೆಟ್ಟಿತು ಮತ್ತು ಇಂಗ್ಲಿಷರು ಯುದ್ಧದಲ್ಲಿ ಕಾರ್ಯತಂತ್ರದ ಲಾಭವನ್ನು ಗಳಿಸಿ ಸ್ಕಾಟ್ ಪಡೆಗಳನ್ನು ಸೋಲಿಸಿದರು.
ವಿಲಿಯಂ ವ್ಯಾಲೇಸ್ (William Wallace) ಮದುವೆಯಾಗಿದ್ದಾನೋ ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೂ ಅವನು ‘ಮರಿಯನ್ ಬ್ರೇಡ್‌ಫ್ಯೂಟ್’ ಎಂಬ ಮಹಿಳೆಯನ್ನು ಮದುವೆಯಾಗಿದ್ದನು ಎಂದು ಕೆಲವು ಮೂಲಗಳು ಹೇಳುತ್ತವೆ. ಇಂಗ್ಲಿಷರಿಂದ ಬಂಧನಕ್ಕೊಳಗಾದ ವ್ಯಾಲೇಸ್‌ನನ್ನು ದೇಶದ್ರೋಹದ ಕಾರಣಕ್ಕೆ ವಿಚಾರಣೆಗೆ ಒಳಪಡಿಸಿ ಆಗಸ್ಟ್ 23, 1305 ರಂದು ಗಲ್ಲಿಗೇರಿಸಲಾಯಿತು. ಅವನನ್ನು ಮೊದಲು ಬೆತ್ತಲೆಗೊಳಿಸಿ ನಗರದ ಮೂಲಕ ಕುದುರೆಗಳಿಂದ ಎಳೆದೊಯ್ಯಲಾಯಿತು. ನೇಣುಹಾಕಿ ಕತ್ತು ಹಿಸುಕಲಾಯಿತಾದರೂ ಆತನು ಸಾಯುವ ಮುನ್ನ ಮತ್ತಷ್ಟು ಚಿತ್ರಹಿಂಸೆ ನೀಡಲು ಬಿಡುಗಡೆ ಮಾಡಲಾಯಿತು. ಅವನ ಹೊಟ್ಟೆಯ ಕರುಳನ್ನು ಹೊರತೆಗೆದು ಅವನ ಕಣ್ಣ ಮುಂದೆ ಸುಡಲಾಯಿತು. ಕೊನೆಗೆ ಅವನ ಶಿರವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಲಾಯಿತು. ಈ ರೀತಿಯ ಭೀಕರ ಮರಣದ ನಂತರ ಅವನ ತಲೆಯನ್ನು ಟಾರಿನಲ್ಲಿ ಅದ್ದಿ ಲಂಡನ್ ಸೇತುವೆಯ ಮೇಲೆ ಇರಿಸಲಾಯಿತು. ಕೆಲವು ವರ್ಷಗಳ ನಂತರ ಸ್ಕಾಟ್ಲೆಂಡ್ ಸ್ವಾತಂತ್ರ‍್ಯವನ್ನು ಸಾಧಿಸಿದ್ದರಿಂದ ಅವನು ತನ್ನ ದೇಶಕ್ಕಾಗಿ ಮಾಡಿದ ಸರ್ವೋಚ್ಚ ತ್ಯಾಗ ವ್ಯರ್ಥವಾಗಲಿಲ್ಲ.ಅವನನ್ನು ಸ್ಕಾಟ್ಲೆಂಡ್‌ನ ಪ್ರಮುಖ ರಾಷ್ಟ್ರೀಯ ನಾಯಕ ಎಂದು ಪರಿಗಣಿಸಿ 1869 ರಲ್ಲಿ ವ್ಯಾಲೇಸ್ ಸ್ಮಾರಕವನ್ನು ನಿರ್ಮಿಸಲಾಯಿತು. ಇದು ಸ್ಟಿರ್ಲಿಂಗ್ ಸೇತುವೆಯಿಂದ ಅವನ ವಿಜಯದ ಸ್ಥಳಕ್ಕೆ ಬಹಳ ಹತ್ತಿರದಲ್ಲಿದೆ.
ವಿಲಿಯಂ ವ್ಯಾಲೇಸ್ (William Wallace) [1270-1305]
# William Wallace
# kannada butti
