ಇಂತಹ ಆಧುನಿಕ ಕಾಲ ಘಟ್ಟದಲ್ಲಿಯೂ ಬಹುಪಾಲು ಕನ್ನಡಿಗರಿಗೆ ತಿಳಿಯದ ಜಗತ್ತಿನ ಮೇರು ವ್ಯಕ್ತಿತ್ವಗಳು ಹಾಗು ಮಹೋನ್ನತ ಘಟನೆಗಳಿವೆ. ನಮಗೆ ತಿಳಿದಿರುವಷ್ಟನ್ನೇ ಮತ್ತೊಬ್ಬರ ಮೇಲೆ ಹೇರುವ ಜಾಣ ನಡೆಗೆ ಬದಲಾಗಿ, ನಮಗೆ ತಿಳಿದಿರದ ವಿಷಯಗಳನ್ನು ಗ್ರಹಿಸಿಕೊಂಡು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದೇವೆ. ವಯಸ್ಸು, ವಿದ್ಯಾರ್ಹತೆಗಳಂತಹ ಮಾನದಂಡಗಳನ್ನು ಮೂಲೆಗಿಟ್ಟು ಕನ್ನಡ ಭಾಷೆಯನ್ನು ಓದಬಲ್ಲಂತಹ ಒಬ್ಬ ಸಾಮಾನ್ಯ ಕನ್ನಡಿಗನನ್ನು ಗುರಿಯಾಗಿಸಿಕೊಂಡು ಈ ಕೆಲಸ ಪ್ರಾರಂಭಗೊಂಡಿದೆ. ನಮ್ಮದೊಂದು ಸಮಾನ ಮನಸ್ಕರ ಗುಂಪು. ಬಿಡುವಿದ್ದಾಗ ಬರೆಯುತ್ತೇವೆ, ಬರೆದದ್ದನ್ನು ನಿಮ್ಮ ಮುಂದಿಡುತ್ತೇವೆ ಹಾಗು ಸದಾ ನೀವು ನಮ್ಮೊಂದಿಗಿರುತ್ತೇರೆಂದು ನಂಬುತ್ತೇವೆ.
-ಇಂತಿ ನಿಮ್ಮ ಕನ್ನಡ ಬುಟ್ಟಿ ಬಳಗ.